ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ ಚಿಲ್ಲೀಸ್‌ ಸ್ಪೋರ್ಟ್ಸ್‌ ಕ್ಲಬ್‌: ಕರಾಟೆಯಲ್ಲಿ ಉತ್ತಮ ಸಾಧನೆ

Published : 8 ಆಗಸ್ಟ್ 2024, 16:31 IST
Last Updated : 8 ಆಗಸ್ಟ್ 2024, 16:31 IST
ಫಾಲೋ ಮಾಡಿ
Comments

ಬ್ಯಾಡಗಿ: ಪಟ್ಟಣದ ಬ್ಯಾಡಗಿ ಚಿಲ್ಲೀಸ್ ಸ್ಪೋರ್ಟ್ಸ್ ಕ್ಲಬ್‌ನ ಕರಾಟೆ ಕ್ರೀಡಾಪಟುಗಳು ಈಚೆಗೆ ಶಿವಮೊಗ್ಗದಲ್ಲಿ ನಡೆದ ಇಂಟರ್‌ನ್ಯಾಷನಲ್ ಒಪನ್ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ರೇವಂತ ಉಜನಿ, ಬಾಲಕರ 7 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ರಕ್ಷಾ ಲಿಂಗದಹಳ್ಳಿ, ಬಾಲಕಿಯರ 8 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ, ಕುಮಿಟೆಯಲ್ಲಿ ತೃತೀಯ ಸ್ಥಾನ, ಚಿಂತನ್ ಸುಂಕಾಪುರ, ಬಾಲಕರ 8 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ, ಜಗನ್ ಜಾಲಿಹಾಳ, ಬಾಲಕರ 9 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ, ಮೊಹಿದ್ದಿನ್ ಹೆರೂರ, ಬಾಲಕರ 11 ವರ್ಷದ ಕಟಾ ವಿಭಾಗದಲ್ಲಿ ದ್ವಿತೀಯ, ಭರತ್ ಬಿಲ್ಲಳ್ಳಿ, ಬಾಲಕರ 11 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ, ಸಿಂಚನಾ ಇಂಡಿಮಠ ಬಾಲಕಿಯರ 11 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕೃಷ್ಣವೇಣಿ ಪೂಜಾರ, ಬಾಲಕಿಯರ 11 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪವನಕುಮಾರ ರಾಮಣ್ಣನವರ, ಬಾಲಕರ 13 ವರ್ಷದ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಹಿರಿಯ ತರಬೇತುದಾರ ಶಿಹಾನ್ ನಾರಾಯಣ ಕೆ ಪೂಜಾರ, ಮನೀಷಾ ಕಬ್ಬೂರ ಮತ್ತು ಕಾರ್ತಿಕ ಪೂಜಾರ ತರಬೇತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT