ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಕ ಪ್ರಚಾರ ಕೈಗೊಳ್ಳಿ: ಡಿ.ಸಿ

ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆವಿಮೆ ನೋಂದಣಿಗೆ ಅವಕಾಶ
Last Updated 4 ನವೆಂಬರ್ 2020, 15:23 IST
ಅಕ್ಷರ ಗಾತ್ರ

ಹಾವೇರಿ: ‘ಪ್ರಸಕ್ತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ (2020-21ನೇ ಸಾಲಿನ) ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ರೈತರನ್ನು ಬೆಳೆವಿಮೆ ವ್ಯಾಪ್ತಿಗೆ ತರಲು ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಶ್ರಮಿಸಬೇಕು ವ್ಯಾಪಕ ಪ್ರಚಾರ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಳೆವಿಮೆ ನೋಂದಣಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಪ್ರಚಾರ ಸಾಮಗ್ರಿಗಳನ್ನು ಬಿಡುಗೊಳಿಸಿ ಅವರು ಮಾತನಾಡಿದರು.

ವಿಮಾ ಕಂಪನಿಗಳು ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸಬೇಕು. ವಿಮಾ ನೋಂದಣಿ ಕಾರ್ಯದ ಜೊತೆಗೆ ನೋಂದಣಿಯಾದ ರೈತರ ಮಾಹಿತಿ ಹಾಗೂ ವಿಮೆ ಮೊತ್ತ ಪಾವತಿಯಾದ ಕುರಿತಂತೆ ಮಾಹಿತಿಯನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದರು.

60 ಸಾವಿರ ಹೆಕ್ಟೇರ್‌ ಬೆಳೆ:ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ‘ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿಯಾಶ್ರಿತ 14 ಬೆಳೆಗಳಿಗೆ ಹಾಗೂ ಬೇಸಿಗೆ ಹಂಗಾಮಿಗೆ ಮೂರು ಬೆಳೆಗಳ ವಿಮಾ ಕಂತು ತುಂಬಲು ಅಧಿಸೂಚಿಸಲಾಗಿದೆ. ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹೊರಗಿರುವ ಪಟ್ಟಣ, ನಗರ, ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸೇರಿದಂತೆ ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂಗಾರು ಹಂಗಾಮಿಗೆ:

ನೀರಾವರಿ ಜೋಳ, ಈರುಳ್ಳಿ ಹಾಗೂ ಮಳೆಯಾಶ್ರಿತ ಜೋಳ, ಕುಸಬೆ, ರ್ಸೂಕಾಂತಿ, ಟೊಮೆಟೊ ಬೆಳೆಗಳ ವಿಮೆ ಕಂತು ತುಂಬಲು ನ.30 ಕೊನೆಯ ದಿನಾಂಕವಾಗಿದೆ. ಮಳೆಯಾಶ್ರಿತ ಕಡಲೆ, ಗೋಧಿ ಹಾಗೂ ನೀರಾವರಿ ಸೂರ್ಯಕಾಂತಿ, ಕಡಲೆ ಬೆಳೆಗೆ ವಿಮೆ ಕಂತು ತುಂಬಲು ಡಿ.16 ಕೊನೆಯ ದಿನಾಂಕವಾಗಿದೆ. ಮಳೆಯಾಶ್ರಿತ ಉದ್ದು, ಹೆಸರು, ಹುರುಳಿ ಹಾಗೂ ನೀರಾವರಿ ಮುಸುಕಿನ ಜೋಳದ ಬೆಳೆ ವಿಮೆ ಕಂತು ತುಂಬಲು ಡಿ.31 ಕೊನೆಯ ದಿನಾಂಕವಾಗಿದೆ. ಬೇಸಿಗೆ ಹಂಗಾಮಿಗೆ ನೀರಾವರಿ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿಗೆ ವಿಮೆ ಕಂತು ತುಂಬಲು ಮಾರ್ಚ್‌ 1, 2021 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕುಮಾರ ಮಣ್ಣವಡ್ಡರ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಪ್ಪ, ಸ್ಫೂರ್ತಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಮೀಶೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT