ಗುರುವಾರ , ಫೆಬ್ರವರಿ 27, 2020
19 °C

ನಗರದ ಎರಡು ಕಡೆ ಸರ ಅ‍ಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದಲ್ಲಿ ಸೋಮವಾರ ರಾತ್ರಿ 7.30ರಿಂದ 8 ಗಂಟೆಯೊಳಗೆ ಎರಡು ಬಡಾವಣೆಗಳಲ್ಲಿ ಸರ ಅಪಹರಣ ನಡೆದಿದೆ. 

ವಿದ್ಯಾನಗರದ ಶಾಂತದೇವಿ ಪಟೆಗಾರ ಮತ್ತು ಬಸವೇಶ್ವರನಗರದ ಲಲಿತಾ ಹಿರೇಮಠ ಚಿನ್ನದ ಸರ ಕಳೆದುಕೊಂಡವರು.

ಈ ಮಹಿಳೆಯರು ತಮ್ಮ ಬಡಾವಣೆಗಳಲ್ಲಿ ವಾಕಿಂಗ್‌ ಮಾಡುತ್ತಿದ್ದ ವೇಳೆ, ಬ್ಲಾಕ್‌ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ. ಸಂಜೆ ವೇಳೆ ನಡೆದ ಈ ಘಟನೆಯಿಂದ ನಿತ್ಯ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯರು ಭಯಭೀತರಾಗಿದ್ದಾರೆ. 

ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು