ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳು ದೈಹಿಕ ಆರೋಗ್ಯಕ್ಕೂ ಆದ್ಯತೆ ನೀಡಲಿ: ಶಿವಬಸವ ಸ್ವಾಮೀಜಿ

Published : 10 ಸೆಪ್ಟೆಂಬರ್ 2024, 14:30 IST
Last Updated : 10 ಸೆಪ್ಟೆಂಬರ್ 2024, 14:30 IST
ಫಾಲೋ ಮಾಡಿ
Comments

ತಡಸ: ಮಕ್ಕಳು ಶೈಕ್ಷಣಿಕ ಪ್ರಗತಿಯ ಜೊತೆಗೆ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು  ಶಿವಬಸವ ಸ್ವಾಮೀಜಿ ಹೇಳಿದರು.

ಗ್ರಾಮದ ಸದ್ಗುರು ಸಿದ್ಧಾರೂಢ ವಿದ್ಯಾಪೀಠ ಹಾಗೂ ದುಂಡಿಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಿಂದ ದುಂಡಿಬಸವೇಶ್ವರ ಪೌಢ ಶಾಲೆಯಲ್ಲಿ ನಡೆದ ಪ್ರಾಥಮಿಕ ಮಟ್ಟದ ತಡಸ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ ಎಂದರು.

ಸದ್ಗುರು ಸಿದ್ದಾರೂಢ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ವಿಠಲ ದುಂಡಪ್ನವರ ಮಾತನಾಡಿ, ಸೋಲು ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ ಮಕ್ಕಳಲ್ಲಿ ಬೆಳೆಯಬೇಕು. ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರು.

ಸಿಆರ್‌ಪಿ ಗಂಗಾಧರ ಹಸಬಿ ಮಾತನಾಡಿ, ಶೈಕ್ಷಣಿಕವಾಗಿ ಮಕ್ಕಳು ಬೆಳೆಯುವುದರ ಜೊತೆಗೆ ಕ್ರೀಡಾ ಜಗತ್ತು ವಿಶಾಲವಾಗಿದ್ದು ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ಉನ್ನತ ಮಟ್ಟದ ಸಾಧನೆ ಮಾಡಲಿ ಎಂದರು.

ಸಿಆರ್‌ಪಿ ನಾಗರಾಜ ಲಮಾಣಿ, ಪ್ರಕಾಶ ನಿಕಂ, ಈರಪ್ಪ ಗೊಣೆಪ್ಪನವರ, ಬಸವರಾಜ ಶಿರಗುಪ್ಪಿ, ದುಂಡಪ್ಪ ಮಲ್ಲಿಗವಾಡ, ಹಾಗೂ ಶಂಕ್ರಣ ಮಹಾಜನ ಶೆಟ್ಟರ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT