ಸೋಮವಾರ, ಜೂನ್ 21, 2021
21 °C

ಕೋವಿಡ್‌ ಪೀಡಿತರಿಗೆ ಕಾಂಗ್ರೆಸ್‌ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಸಹಯೋಗದಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ ಸಮಿತಿ ನೇತೃತ್ವದಲ್ಲಿ ಹೋಮ್‌ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ನೀಡಲು ‘ಹೋಮ್‌ ಐಸೋಲೇಷನ್‌ ಕಿಟ್‌’ಗಳನ್ನು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬ್ಲಾಕ್‌ ಅಧ್ಯಕ್ಷರುಗಳಿಗೆ ಹಸ್ತಾಂತರ ಮಾಡಲಾಯಿತು.  

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿ, ‘ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಕೋವಿಡ್ ಸೋಂಕು ಬಂದಾಗಿನಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಈ ಹೋಂ ಐಸೋಲೇಷನ್ ಕಿಟ್ ಗಳನ್ನು ಎಲ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನೀಡಿ, ಅವರವರ ಬ್ಲಾಕ್ ನಲ್ಲಿರುವ ಕೋವಿಡ್ ಸೊಂಕಿತರಿಗೆ ನೀಡಬೇಕೆಂದು ಹೇಳಿದರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತಾರೀನ ರಬ್ಬಾನಿ, ಅಲ್ಪಾಜ್ ಹಾವೇರಿ, ಅಜಯ ಬಂಡಿವಡ್ಡರ, ಉಮರ್ ಇನಾಮದಾರ, ರಫೀಕ್ ಖಾದಿ, ಮುಖಂಡರಾದ ಮಹಾಲಿಂಗಯ್ಯ ಹಿರೇಮಠ, ಉಮೀದ್ ನದಾಫ್, ಶಹಾಬಾಜ್ ಖಾನ್ ಕುಲಕರ್ಣಿ, ರಫೀಕ್ ನದಾಫ್, ನವೀದ್ ವರ್ದಿ, ಗಂಗಣ್ಣ ಶಿರೂರ, ಗಂಗಾಧರ ಕಾರಬರಿ, ಶರತ್, ಆರ್‌.ಜಿ. ಪಾಟೀಲ, ರವಿ ವಾಲ್ಮೀಕಿ, ರವಿ ಕತ್ತಿ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು