ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಎಂಜಿನಿಯರ್‌ ಸೇರಿ 66 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 1579ಕ್ಕೆ ಏರಿಕೆಯಾದ ಪ್ರಕರಣಗಳು: ಶಿವಬಸವೇಶ್ವರನಗರದ ವೃದ್ಧೆ ಸಾವು
Last Updated 6 ಆಗಸ್ಟ್ 2020, 14:59 IST
ಅಕ್ಷರ ಗಾತ್ರ

ಹಾವೇರಿ: ರೈಲ್ವೆ ಎಂಜಿನಿಯರ್‌, ಸರ್ಕಾರಿ ಆಸ್ಪತ್ರೆ ವೈದ್ಯ, ಪೊಲೀಸ್, ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 66 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,579 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 825 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಟ್ಟಾರೆ 32 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. 142 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿ ಹಾಗೂ 580 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ ಹೆಲ್ತ್‌ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಗುರುವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ-1, ಹಾನಗಲ್-6, ಹಾವೇರಿ-22, ಹಿರೇಕೆರೂರು-5, ರಾಣೆಬೆನ್ನೂರು-27, ಸವಣೂರ-2, ಶಿಗ್ಗಾವಿ ತಾಲ್ಲೂಕಿನಲ್ಲಿ 3 ಪ್ರಕರಣಗಳು ದೃಢಪಟ್ಟಿವೆ.

ಬ್ಯಾಡಗಿ ಪಟ್ಟಣ ಹಾನಗಲ್ ಪಟ್ಟಣ, ಕಾಲ್ವೆಯಲ್ಲಾಪೂರ, ಕೆಲವರಕೊಪ್ಪದ, ಆಡೂರಿನ ತಲಾ ಒಬ್ಬರಿಗೆ ಹಾಗೂ ಅಕ್ಕಿಆಲೂರಿನ ಇಬ್ಬರಿಗೆ, ಹಾವೇರಿ ನಗರದ 11, ಗುತ್ತಲದ ಐವರಿಗೆ, ಹಾವನೂರಿನ, ಬೂದಗಟ್ಟಿ, ಕೋಳೂರ, ಹಂದಿಗನೂರು, ಯಲಗಚ್ಚನ ತಲಾ ಒಬ್ಬರಿಗೆ, ಹಿರೇಕೆರೂರು ತಾಲೂಕಿನ ಹೊಸಳ್ಳಿಯ ಇಬ್ಬರಿಗೆ, ಶಿರಗುಂಬಿ, ಮಾಸೂರು, ರಟ್ಟೀಹಳ್ಳಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರು ನಗರದ ವಿವಿಧ ಬಡಾವಣೆಯ 21 ಮಂದಿಗೆ, ದೇವರಗುಡ್ಡದ ಇಬ್ಬರಿಗೆ, ಅರೇಮಲ್ಲಾಪುರ, ಮಾಕನೂರು, ಕವಲೆತ್ತು, ಹೂಲಿಕಟ್ಟಿ ಗ್ರಾಮಗಳ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸವಣೂರ ತಾಲ್ಲೂಕು ಹಳೆ ಗುಂಡೂರ ಹಾಗೂ ಗುಂಡೂರಿನ ತಲಾ ಒಬ್ಬರಿಗೆ, ಶಿಗ್ಗಾವಿ ತಾಲ್ಲೂಕಿನ ಕ್ಯಾಲಕೊಂಡ ಗ್ರಾಮದ ಇಬ್ಬರಿಗೆ ಹಾಗೂ ಬಂಕಾಪುರ ಪಟ್ಟಣದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮರಣದ ವಿವರ:ಹಾವೇರಿ ಶಿವಬಸವೇಶ್ವರನಗರದ 70 ವರ್ಷದ ಮಹಿಳೆ (ಪಿ-159147) ತೀವ್ರ ಉಸಿರಾಟದ ಸಮಸ್ಯೆಯಿಂದ ಆಗಸ್ಟ್ 4 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಆ ದಿನವೇ ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ನಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 5ರಂದು ಮೃತಪಟ್ಟಿರುತ್ತಾರೆ. ಕೋವಿಡ್ ನಿಯಮಾನುಸಾರ ಶವಸಂಸ್ಕಾರ ನೆರವೇರಿಸಲಾಗಿದೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೈನ್‍ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT