ಗುರುವಾರ , ನವೆಂಬರ್ 26, 2020
21 °C

ಗುಂಡಿಗೆ ಬಿದ್ದು ಮೂವರು ಮಕ್ಕಳ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ಪಟ್ಟಣದ ಸಂತೆ ಮೈದಾನದಲ್ಲಿ ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೆಗೆದ ಗುಂಡಿಯಲ್ಲಿ ಮುಳುಗಿ ಮೂರು ಮಕ್ಕಳು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಗೋವಾದಿಂದ ದೇವಿಹೊಸೂರು ಗ್ರಾಮದ ಅಜ್ಜನ ಮನೆಗೆ ಬಂದಿದ್ದ ಇನಾಯತ್‌ ಹಾವಣಗಿ ಅವರ ಮಕ್ಕಳಾದ ಸೈಯದ್‌ ಅಕ್ಮಲ್‌ (8), ಸೈಯದ್‌ ಆಶ್ಫಕ್‌‌ (10) ಹಾಗೂ ಕುಂಬಾರ ಓಣಿಯ ಜಾಫರ್‌ ಅನಾಮುಲ್ಲಾ ಸವಣೂರ (10) ಮೃತಪಟ್ಟ ಮಕ್ಕಳು.

ಸಂತೆಗೆ ಹೊರಟಿದ್ದ ತಾಯಿಯನ್ನು ಹಿಂಬಾಲಿಸಿ ಬರುತ್ತಿದ್ದ ಮಕ್ಕಳನ್ನು ವಾಪಸ್‌ ಮನೆಗೆ ಕಳುಹಿಸಲಾಗಿತ್ತು. ಆದರೆ ಮೂರು ಮಕ್ಕಳು ಸೇರಿಕೊಂಡು ಆಟವಾಡಲು ಶಾಲಾ ಮೈದಾನಕ್ಕೆ ತೆರಳಿದ್ದವು. ಈ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿವೆ ಎನ್ನಲಾಗಿದೆ. 

ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ವೈಯಕ್ತಿಕವಾಗಿ ತಲಾ ಮಕ್ಕಳಿಗೆ ₹25 ಸಾವಿರ ಹಾಗೂ ಸರ್ಕಾರದಿಂದ ತಲಾ ಮಕ್ಕಳಿಗೆ ₹5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು