ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮುಳುಗಿದ ಬಂಡಿ, ಎತ್ತು ಸಾವು

Last Updated 23 ಅಕ್ಟೋಬರ್ 2020, 15:37 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಕೋಳೂರು ಗ್ರಾಮದ ಸಮೀಪ ರೈಲ್ವೆ ಕೆಳ ಸೇತುವೆಯಲ್ಲಿ (ಅಂಡರ್‌ ಪಾಸ್‌‌) ನಿಂತ ಆಳವಾದ ನೀರಿನಲ್ಲಿ ಶುಕ್ರವಾರ ಎತ್ತಿನ ಬಂಡಿ ಮುಳುಗಿದ ಪರಿಣಾಮ ಒಂದು ಎತ್ತು ಮೃತಪಟ್ಟಿದ್ದು, ರೈತ ಅಸ್ವಸ್ಥರಾಗಿದ್ದಾರೆ.

ಗ್ರಾಮದ ಅಲ್ತಾಫ್‌‌ ಎಂಬ ರೈತ ಹೊಲಕ್ಕೆ ಎತ್ತಿನ ಬಂಡಿಯಲ್ಲಿ ಹೋಗುವ ಸಂದರ್ಭ ದುರ್ಘಟನೆ ನಡೆದಿದೆ. ನೀರು ನೋಡಿ ಬೆದರಿದ ಎತ್ತುಗಳು ಬಂಡಿಯನ್ನು ವೇಗವಾಗಿ ಎಳೆದುಕೊಂಡು ಹೋಗಿವೆ. ಆಳದ ನೀರಿನಲ್ಲಿ ಬಂಡಿ ಮುಳುಗಿದಾಗ, ನೀರನ್ನು ಕುಡಿದ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿತು. ನೀರಿನಲ್ಲಿ ಮುಳುಗಿದ್ದ ರೈತ ಮತ್ತು ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿದರು. ಅಸ್ವಸ್ಥನಾಗಿದ್ದ ಅಲ್ತಾಫ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ:‘ನಾವು ಮೊದಲು ರೈಲ್ವೆ ಹಳಿಯನ್ನು ದಾಟಿ ಹೊಲಗಳಿಗೆ ಹೋಗುತ್ತಿದ್ದೆವು. ಸಂಚಾರಕ್ಕೆ ಅನುಕೂಲವಾಗಲೆಂದು ಎರಡು ವರ್ಷಗಳ ಹಿಂದೆ ನಿರ್ಮಿಸಿದ ಕೆಳ ಸೇತುವೆ ರೈತರು ಮತ್ತು ಸಾರ್ವಜನಿಕರಿಗೆ ಅಪಾಯಕಾರಿಯಾಗಿದೆ.‌ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದರಿಂದ ಮಳೆಗಾಲದಲ್ಲಿ ನಾಲ್ಕೈದು ಅಡಿ ಎತ್ತರಕ್ಕೆ ನೀರು ನಿಲ್ಲುತ್ತಿದೆ. ಹೀಗಾಗಿ, ಇಂಥ ಅವಘಡಗಳು ಪದೇ ಪದೇ ಆಗುತ್ತಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋಳೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT