ಕುಮಾರಪಟ್ಟಣ: ಮಕ್ಕಳಲ್ಲಿ ಪರಿಸರಪ್ರೇಮ ಮೂಡಿಸುವುದು ಅವಶ್ಯ. ಭೂಮಿಯ ಮೇಲಿರುವ ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರಕೃತಿಯೇ ಆಶ್ರಯ ತಾಣವಾಗಿದೆ. ನಮ್ಮ ವಾಸಕ್ಕಿರುವುದು ಒಂದೇ ಭೂಮಿ. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅಮೃತವರ್ಷಿಣಿ ವಿದ್ಯಾಲಯದ ಸಂಸ್ಥಾಪಕ ಪಿ.ಕೆ. ಪ್ರಕಾಶರಾವ್ ಹೇಳಿದರು.

ಸಮೀಪದ ಕೊಡಿಯಾಲದ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಬುಧವಾರ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ನಿರಂತರವಾಗಿರಬೇಕು. ‘ನಮ್ಮ ಭೂಮಿ ನಮ್ಮ ಭವಿಷ್ಯ’ ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ವಿದ್ಯಾಲಯದ ಆವರಣದಲ್ಲಿ 1 ರಿಂದ 5ನೇ ತರಗತಿಯ ಮಕ್ಕಳು ಗಿಡಗಳಿಗೆ ನೀರುಣಿಸಿದರೆ, ಶಿಕ್ಷಕರಿಂದ ಭಾಷಣ ಹಾಗೂ ಗಾಯನ ಸ್ಪರ್ಧೆ, 6 ರಿಂದ 10 ನೇ ತರಗತಿಯವರೆಗಿನ ಪ್ರತಿಯೊಂದು ತರಗತಿಯ ಮಕ್ಕಳಿಗೂ ಒಂದೊಂದು ಕಾರ್ಯಕ್ರಮ ರೂಪಿಸಿ ಪರಿಸರ ಸಂರಕ್ಷಣೆಗೆ ಪ್ರತಿ ಮಗುವೂ ವಿಶೇಷ ಕೊಡುಗೆಗಳನ್ನು ನೀಡಲು ಸಹಕರಿಸಲಾಯಿತು.

6ನೇ ತರಗತಿ ಮಕ್ಕಳು 350ಕ್ಕೂ ಹೆಚ್ಚು ಗಿಡಗಳನ್ನು ಶಾಲೆಯ ಆವರಣದ ಸುತ್ತಲೂ ನೆಡಲಾಯಿತು. 7ನೇ ತರಗತಿ ಮಕ್ಕಳಿಂದ ಪರಿಸರ ಸ್ವಚ್ಛತೆ, 8ನೇ ತರಗತಿ ಮಕ್ಕಳಿಗೆ ಚಿತ್ರಕಲೆ, 9ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಕ್ಕೂ ಹೆಚ್ಚು ಜಾಗೃತಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾಲಯದ ಕಾರ್ಯದರ್ಶಿ ವಿನಯ್ ರಾವ್, ಮುಖ್ಯ ಶಿಕ್ಷಕಿ ಚೇತನ ವಿನಯ್ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.