ಗುರುವಾರ , ಜೂನ್ 24, 2021
21 °C
ರಸಗೊಬ್ಬರ ದರ ಕಡಿಮೆ ಮಾಡಲು ರೈತರ ಒತ್ತಾಯ

ಪ್ಯಾಕೇಜ್‌ ಘೋಷಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಕೋವಿಡ್‌-19 ಲಾಕ್‌ಡೌನ್‌ನಿಂದ ರೈತರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ– ವಹಿವಾಟು ಇಲ್ಲದೇ ಜೀವನ ನಡೆಸುವುದು ದುರಸ್ತರವಾಗಿದೆ. ಅನೇಕರು ಸಾವಿಗೀಡಾದ ಕಾರಣ ಅವರ ಕುಟುಂಬದವರು ಬೀದಿಗೆ ಬಂದಿದ್ದಾರೆ. ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ಕೂಡಲೇ ಪ್ಯಾಕೇಜ್‌ ಘೋಷಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಸಿ ತಹಶೀಲ್ದಾರ್ ಅರುಣ ಕಾರಗಿ ಅವರ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಕೊರೊನಾ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ನಿಯಂತ್ರಣಕ್ಕೆ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ರೈತರು, ಬೀದಿ ವ್ಯಾಪಾರಸ್ಥರು ಲಾಕ್‌ಡೌನ್‌ನಿಂದ ತೀವ್ರ ತೊಂದರೆಗೀಡಾಗಿದ್ದಾರೆ. ಮತ್ತೆ ಲಾಕ್‌ಡೌನ್‌ ಮುಂದುವರಿಸುವ ಸಂಭವ ಹೆಚ್ಚಾಗಿದೆ. ಆದ್ದರಿಂದ ವ್ಯಾಪಾರಸ್ಥರಿಗೆ ಸರ್ಕಾರ ಪ್ಯಾಕೇಜ್‌ ಘೋಷಣೆ ಮಾಡಬೇಕು. ಸಣ್ಣ ಹಿಡುವಳಿದಾರರಿಗೆ ಸಾಲ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.

ಮುಂಗಾರು ಉತ್ತಮವಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಗಿದೆ. ಗೊಬ್ಬರ ದರ ಹೆಚ್ಚಾಗಿದ್ದರಿಂದ ಗೊಬ್ಬರ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಗೊಬ್ಬರದ ದರ ಕಡಿಮೆಗೊಳಿಸಬೇಕು. ಉತ್ತಮ ತಳಿಯ ಬೀಜ ಖರೀದಿಸಲು ಹಣದ ಕೊರತೆಯಾಗಿದ್ದು ಸರ್ಕಾರ ಸಬ್ಸಿಡಿ ಘೋಷಣೆ ಮಾಡಬೇಕು. ಕಡಿಮೆ ದರದಲ್ಲಿ ಬೀಜಗೊಬ್ಬರವನ್ನು ರೈತರಿಗೆ ಒದಗಿಸಬೇಕು ಎಂದರು.

ಕರಬಸಪ್ಪ ಕೂಲೇರ, ಬ್ರಹ್ಮಾನಂದ ಉಜ್ಜೇರ, ವಿಶ್ವನಾಥ ಹೊಳೆಬಾಗಿಲ, ಅಲ್ಲಾಸಾಹೇಬ್‌ ರಾಣೆಬೆನ್ನೂರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು