ಹಾವೇರಿ: ‘ಮರಿ ಕಲ್ಯಾಣ ಖ್ಯಾತಿಯ ಹಾವೇರಿಯಲ್ಲಿ ಸರ್ವ ಜನರ ಏಳಿಗೆಗಾಗಿ ಜೈ ಮಾನವ ಕಲ್ಯಾಣ ಸಂಘಟನೆ ಸ್ಥಾಪಿಸಲಾಗಿದೆ. ಇದರ ಮೂಲಕ ಪ್ರತಿ ವರ್ಷ 100 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.

ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಮೇಕ್ ವೇಲ್ಫೇರ್ ಫೌಂಡೇಶನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಜೈ ಮಾನವ ಸಮಾವೇಶ’ ಹಾಗೂ ‘ಜೈ ಮಾನವ ಕಲ್ಯಾಣ ಸಂಘಟನೆ ಉದ್ಘಾಟನೆ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಜಗತ್ತಿನ ವಿವಿಧೆಡೆಯ ಶರಣರು, ಧರ್ಮ–ಜಾತಿ ಎಲ್ಲವನ್ನೂ ಮೀರಿ ವಿಶ್ವಗುರು ಬಸವಣ್ಣನವರ ಸಮಾಜ ಸುಧಾರಣೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕಲ್ಯಾಣಕ್ಕೆ ಬಂದರು. ಇಂದಿನ ಆಧುನಿಕ ಯುಗದಲ್ಲಿ ದುಬೈ ಸೇರಿದಂತೆ ಜಗತ್ತಿನ ಹಲವೆಡೆಯ ಜನರು ಇಂದು ಮರಿ ಕಲ್ಯಾಣ ಹಾವೇರಿಗೆ ಬಂದು ಮಾನವ ಏಳಿಗೆಗೆ ಕೈ ಜೋಡಿಸಿದ್ದಾರೆ’ ಎಂದರು.

‘ಭಾರತದ ಇತಿಹಾಸ ಗಮನಿಸಿದಾಗ, ಹಿಂದೂ–ಮುಸ್ಲಿಂ ಸಮುದಾಯದವರ ನಡುವೆ ಹಾವು–ಮುಂಗುಸಿ ರೀತಿಯಲ್ಲಿ ಧರ್ಮಯುದ್ಧವೇ ನಡೆದಿದೆ. ಇಂಥ ಸಂದರ್ಭದಲ್ಲಿ ಸ್ವಾಮೀಜಿಯವರು, ಸರ್ವ ಧರ್ಮದವರನ್ನು ಸೇರಿಕೊಂಡು ಸಂಘಟನೆ ಕಟ್ಟಿರುವ ಬಗ್ಗೆ ಜನರು ಏನೇನು ಅಂದುಕೊಳ್ಳುತ್ತಾರೆ. ಆದರೆ, ನಮ್ಮ ಭಾರತ ಭಾವೈಕ್ಯದ ದೇಶ. ಒಂದೇ ಧರ್ಮ, ಜಾತಿಯ ವ್ಯವಸ್ಥೆಯಿಲ್ಲ. ಸರ್ವ ಧರ್ಮ–ಜಾತಿಯ ಜನರು ದೇಶದಲ್ಲಿದ್ದಾರೆ. ಅದಕ್ಕೆ ಭಾರತ, ಸರ್ವ ಜನಾಂಗದ ತೋಟವಾಗಿದೆ. ಹೀಗಾಗಿ, ಎಲ್ಲ ಧರ್ಮದವರು ಸೇರಿಕೊಂಡು ಸಂಘಟನೆ ಕಟ್ಟಲಾಗಿದೆ’ ಎಂದು ಹೇಳಿದರು.

‘ಬಡತನ ಹಾಗೂ ಇತರೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ, ಶಿಕ್ಷಣ ನೀಡುವುದು. ಅವರವರ ಧರ್ಮದ ಆಚರಣೆಗೆ ತಕ್ಕಂತೆ ಸಾಮೂಹಿಕ ವಿವಾಹ ಏರ್ಪಡಿಸುವುದು. ಅನಾಥ ಶವಗಳನ್ನು ಅವರವರ ಧರ್ಮದಂತೆ ಅಂತ್ಯ ಸಂಸ್ಕಾರ ಮಾಡುವುದು. ಆರೋಗ್ಯ, ನೇತ್ರ ತಪಾಸಣೆ ಏರ್ಪಡಿಸುವುದು’ ಎಂದರು.

ಮೇಕ್ ವೇಲ್ಫೇರ್ ಫೌಂಡೇಶನ್ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಧರ್ಮಗುರು ಮುಸ್ತಫ ರಝಾ ನಈಮಿ ಮಾತನಾಡಿ, ‘ನನ್ನದು ಮಂಗಳೂರು. ಆದರೆ, ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತವಾಗಿದ್ದು ಗಮನಿಸಿದೆ. ಅದೇ ಕಾರಣಕ್ಕೆ ಫೌಂಡೇಶನ್ ಆರಂಭಿಸಿ, ಶಾಲೆಗಳನ್ನು ದತ್ತು ಪಡೆದು ನಡೆಸುತ್ತಿದ್ದೇವೆ. ಇಂದು ಸಂಘಟನೆ ಕಟ್ಟಿದ್ದೇವೆ. ಹಿಂದೂ–ಮುಸ್ಲಿಂ ಭೇದವಿಲ್ಲದೇ, ಸರ್ವರಿಗೂ ಶಿಕ್ಷಣ ಕೊಡಿಸುವುದು ಹಾಗೂ ಮನುಷ್ಯನ ಏಳಿಗೆಗೆ ಕೆಲಸ ಮಾಡುವುದು ನಮ್ಮ ಉದ್ದೇಶ’ ಎಂದರು.

ಸೌದಿ ಅರೇಬಿಯಾದ ಅನಿವಾಸಿ ಉದ್ಯಮಿ ಝಕರಿಯ್ಯಾ ಮುಝೈನ್ ಅಲ್ ಜುಬೈಲ್ ಅವರಿಗೆ 2025ನೇ ಸಾಲಿನ ಪ್ರಥಮ ‘ಜೈ ಮಾನವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನೆಹರು ಓಲೇಕಾರ, ಸಾಹಿತಿ ಸತೀಶ ಕುಲಕರ್ಣಿ ಇದ್ದರು.

'ಮನುಷ್ಯನ ಮನಸ್ಸು ಕೆಟ್ಟಿದೆ’:

‘ಜಗತ್ತು ಕೆಟ್ಟಿರುವುದಾಗಿ ನಾವೆಲ್ಲರೂ ತೆಗಳುತ್ತಿದ್ದೇವೆ. ಆದರೆ ಜಗತ್ತು ಕೆಟ್ಟಿಲ್ಲ. ಕೆಟ್ಟಿರುವುದು ಮನುಷ್ಯನ ಮನಸ್ಸು’ ಎಂದು ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವೇಶ್ವರ ಸ್ವಾಮೀಜಿ ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಅವರು ‘ಸೂರ್ಯ– ಚಂದ್ರ ಬದಲಾಗಿಲ್ಲ. ಆದರೆ ಮನುಷ್ಯನ ಭಾವನೆ ನೋಟ ವಿಚಾರ ಎಲ್ಲವೂ ಬದಲಾಗಿದೆ. ಎಲ್ಲರ ಮನಸ್ಸುಗಳು ಶುದ್ಧವಾಗಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.