ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಬೀದಿ ವ್ಯಾಪಾರಿಯ ಮಗಳ ಉತ್ತಮ ಸಾಧನೆ

Last Updated 19 ಅಕ್ಟೋಬರ್ 2020, 3:18 IST
ಅಕ್ಷರ ಗಾತ್ರ

ಹಾವೇರಿ: ನಗರದ ಬೀದಿಬದಿ ವ್ಯಾಪಾರಸ್ಥರೊಬ್ಬರ ಪುತ್ರಿ ಲಕ್ಷ್ಮಿ ಶಿವಾಸಲಿ ಈ ಬಾರಿಯ ‘ನೀಟ್’‌ ಪರೀಕ್ಷೆಯಲ್ಲಿ ಒಟ್ಟು 720ಕ್ಕೆ 643 ಅಂಕಗಳನ್ನು ಪಡೆದು, 1,811ನೇ ಕ್ಯಾಟಗರಿ ರ‍್ಯಾಂಕ್‌ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಲಕ್ಷ್ಮಿ ಅವರುಬಸವೇಶ್ವರ ನಗರದ ‘ಎ’ ಬ್ಲಾಕ್‌ ನಿವಾಸಿಯಾಗಿದ್ದು, ಇವರ ತಂದೆ ಮಂಜುನಾಥ ಶಿವಸಾಲಿ 34 ವರ್ಷದಿಂದ ತಳ್ಳುವ ಗಾಡಿಯಲ್ಲಿ ಪಾನ್‌ಶಾಪ್‌ ನಡೆಸುತ್ತಾರೆ. ಕಳೆದ ಬಾರಿ 412 ಅಂಕಗಳನ್ನು ಪಡೆದು 55,212 ಕ್ಯಾಟಗರಿ ರ‍್ಯಾಂಕ್‌ ಪಡೆದಿದ್ದ ಲಕ್ಷ್ಮಿ ಅವರಿಗೆ ಖಾಸಗಿ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಸಿಕ್ಕಿತ್ತು. ಆದರೆ, ಬಡತನದ ಕಾರಣದಿಂದ ₹7 ಲಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಪ್ರವೇಶಾತಿ ಪಡೆದಿರಲಿಲ್ಲ.

ಪಾನ್‌ಶಾಪ್‌ ವ್ಯಾಪಾರದಲ್ಲಿ ನಿರತರಾಗಿರುವ ಹಾವೇರಿಯ ಮಂಜುನಾಥ ಶಿವಸಾಲಿ

‘ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಬೇಕು ಎಂಬ ಹಟತೊಟ್ಟೆ. ಒಂದು ವರ್ಷ ಬೆಂಗಳೂರಿನಲ್ಲಿ ಕೋಚಿಂಗ್‌ ಪಡೆದು ಈ ಬಾರಿ 5188 ಆಲ್‌ ಇಂಡಿಯಾ ರ‍್ಯಾಂಕಿಂಗ್‌ ಪಡೆದಿದ್ದೇನೆ. ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟ್‌ ಸಿಗಲಿದೆ. ಎಂ.ಬಿ.ಬಿ.ಎಸ್‌ ಮತ್ತು ಎಂ.ಡಿ ವ್ಯಾಸಂಗ ಮಾಡಿ ಬಡಜನರ ಸೇವೆ ಮಾಡುವ ಗುರಿ ಹೊಂದಿದ್ದೇನೆ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್‌ ನಾನು ನಾಲ್ಕನೇ ತರಗತಿ ಫೇಲ್‌, ನನಗೆ ಒಳ್ಳೆಯ ಶಿಕ್ಷಣ ಪಡೆಯುವ ಯೋಗವಿರಲಿಲ್ಲ. ಹಾಗಾಗಿ ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೇನೆ. ಪುತ್ರ ಎಂಜಿನಿಯರ್‌ ಆಗಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪುತ್ರಿಗೆ ಮೆಡಿಕಲ್‌ ಸೀಟ್‌ ಸಿಗಲಿದೆ’ ಎಂದು ತಂದೆ ಮಂಜುನಾಥ ಶಿವಸಾಲಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT