ಭಾನುವಾರ, ಏಪ್ರಿಲ್ 18, 2021
25 °C

ಸವನಿಧಿ ಆಯಿತಲೇ ಪರಾಕ್: ಗೊರವಯ್ಯ ಕಾರ್ಣಿಕ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಗುತ್ತಲ: ಇಲ್ಲಿಗೆ ಸಮಿಪದ ಹಾವನೂರ ಗ್ರಾಮದಲ್ಲಿ ಭಾನುವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ "ಸವನಿಧಿ ಆಯಿತಲೇ...ಪರಾಕ್" ಎಂದು ಗೊರವಯ್ಯ ಕಾರ್ಣಿಕ ನುಡಿದರು.

ಸವನಿಧಿ ಆಯಿತಲೇ.. ಎಂಬುವುದು ಸುಖ-ದುಃಖ ಮಳೆ, ಬೆಳೆ ಎಲ್ಲವೂ ಸಮನಾಗಿ ಸಾಗುತ್ತವೆ ಎಂದು ಅರ್ಥ ಕಲ್ಪಿಸುತ್ತದೆ ಎಂದು ಗ್ರಾಮದ ಹಿರಿಯರು ವಿಶ್ಲೇಷಿಸಿದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಾರ್ಣಿಕ ಕೇಳಲು ಅವಕಾಶ ಸಿಗದ ಕಾರಣ ಹಾವನೂರು ಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬಂದಿದ್ದರು.

ಭಕ್ತರು ಮಾಸ್ಕ್ ಧರಿಸದೆ ಅಂತರ ಕಾಯ್ದುಕೊಳ್ಳದೆ ಕಾರ್ಣಿಕ ಕೇಳಲು ಗುಂಪುಗೂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು