ಗುರುವಾರ , ಜನವರಿ 28, 2021
16 °C

ಸಂಭ್ರಮದ ಗೌರಿ ಹುಣ್ಣಿಮೆ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಾರ್ತೀಕ ಮಾಸದಲ್ಲಿ ಬರುವ ‘ಗೌರಿ ಹುಣ್ಣಿಮೆ’ಯನ್ನು ಸೋಮವಾರ ತಾಲ್ಲೂಕಿನ ಗುತ್ತಲ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಗೌರಿಯನ್ನು ಕೂಡಿಸಿ ಆ ಗೌರಿಗೆ ಚೆಂಡು ಹೂವು, ಸೇವಂತಿ ಹಾಗೂ ಅಂಬರ ಹೂಗಳಿಂದ ಅಲಂಕರಿಸಿ ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಗೊಂಬೆ ಹಾಗೂ ದೀಪಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಹಾಲ ಬೆಳದಿಂಗಳ ಬೆಳಕಲ್ಲಿ ಎಲ್ಲ ಮಕ್ಕಳು, ಮಹಿಳೆಯರು ಶೃಂಗಾರಗೊಂಡು ತಟ್ಟೆಗಳಲ್ಲಿ ಆರತಿ ಹಾಗೂ ದೀಪಗಳನ್ನು ಹಚ್ಚಿ ಗೌರಿಗೆ ಆರತಿ ಮಾಡಲು ಹೊರಟಾಗ ಅದರ ಸೊಬಗನ್ನು ನೋಡುವುದೇ ಚೆಂದ. ಆರತಿಯನ್ನು ಬೆಳಗುವಾಗ ಗೌರಿಯ ಕುರಿತು ಹಾಡುಗಳನ್ನು ಹಾಡಿದರು. ಐದು ದಿನಗಳ ಕಾಲ ಅಂದರೆ ಕೃಷ್ಣ ಪಕ್ಷದ ಪಂಚಮಿಯವರೆಗೂ ಗೌರಿಯನ್ನು ಕೂಡಿಸುತ್ತಾರೆ. ನಂತರ ಗೌರಿಯನ್ನು ವಿಸರ್ಜಿಸುವ ಸಮಯದಲ್ಲಿ ಊರಿನ ಎಲ್ಲ ಮಹಿಳೆಯರು ಸೇರಿ ಗೌರಿಯನ್ನು ತಲೆಯ ಮೇಲೆ ಕೂಡಿಸಿಕೊಂಡು ಒಂದು ಹಾಡು ಹೇಳುವ ಸಂಪ್ರದಾಯವಿದೆ. 

ಮಹಿಳೆಯರು ಗ್ರಾಮದ ದೇವಾಲಯಗಳಿಗೆ ತೆರಳಿ ಆರತಿ ಬೆಳಗುತ್ತಾರೆ. ನಂತರ ಸಂಬಂಧಿಕರ ಮನೆ– ಮನೆಗೆ ತೆರಳಿ ಕೋಲಾಟ ಆಡಿ, ಆರತಿ ಬೆಳಗಿ ಅವರಿಂದ ಉಡುಗೊರೆ ಪಡೆಯುವುದರ ಮೂಲಕ ಹಬ್ಬವನ್ನು ಸಂಭ್ರಮಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು