ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ | ವಿದ್ಯುತ್ ಕಂಬಗಳಿಗೆ ಎಲೆ ಬಳಿ: ಅಪಘಾತಕ್ಕೆ ಆಹ್ವಾನ

Published : 19 ಸೆಪ್ಟೆಂಬರ್ 2024, 15:31 IST
Last Updated : 19 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ಶಿಗ್ಗಾವಿ: ಪಟ್ಟಣದಿಂದ ಗಂಗೇಬಾವಿ ಕ್ರಾಸ್ ಬಳಿ ಗಂಗೇಬಾವಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಎಲೆ ಬಳಿ ಸಂಪೂರ್ಣ ಸುತ್ತಿ ವಿದ್ಯುತ್ ಕಂಬಗಳು ಕಾಣದಂತಾಗಿದ್ದು, ಅಪಘಾತಕ್ಕೆ ಆಹ್ವನ ನೀಡುವಂತಾಗಿದೆ. ತಕ್ಷಣ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಇದನ್ನು ಸ್ವಚ್ಚಗೊಳಿಸುವ ಕೆಲಸ ಮಾಡಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಗಂಗೇಬಾವಿ ಕ್ರಾಸ್ ದ ಮೂಲಕ ಗಂಗೇಬಾವಿ ಕೆ.ಎಸ್.ಆರ್.ಪಿ 10ನೇ ಪಡೆಗೆ ನಿತ್ಯ ಸಿಬ್ಬಂದಿ ಓಡಾಡುತ್ತಿದ್ದಾರೆ. ಅಲ್ಲಿದೆ ಗಂಗೇಬಾವಿಯಿಂದ ಶಿಗ್ಗಾವಿ ಶಾಲಾ ಕಾಲೇಜಿನ ವಿದ್ಯಾಥರ್ಿಗಳು ಅಲೆದಾಡುತ್ತಾರೆ. ಹತ್ತಿರದಲ್ಲಿ ಸಣ್ಣ ಕೈಗಾರಿಕಾ ಕೇಂದ್ರಗಳಿವೆ. ದೇವಸ್ಥಾನಗಳಿಗೆ ಮಹಿಳೆಯರು, ಮಕ್ಕಳು ಸಂಚರಿಸುತ್ತಾರೆ. ಆದರೂ ಈ ಕಡೆ ಅಧಿಕಾರಿಗಳು ಗಮನ ಹರಿಸಿಲ್ಲ.

ಸಾರ್ವಜನಿಕರಿಗೆ ವಿದ್ಯುತ್ ತಾಗುವ ಸಾಧ್ಯತೆಗಳಿವೆ. ನಿತ್ಯ ಜಾನುವಾರುಗಳು ರಸ್ತೆ ಬದೆಗಿನ ಹುಲ್ಲ ಮೇಯಿಯಲು ಬಿಡುತ್ತಿದ್ದಾರೆ. ಹೀಗಾಗಿ ವಿದ್ಯುತ್ ಕಂಬಗಳಿಗೆ ಬೆಳೆದ ಎಲೆ ಬಳಿಯನ್ನು ಸ್ವಚ್ಚಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೊಂದ ಸಾರ್ವಜನಿಕರು, ಶಿಗ್ಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT