ಹಾನಗಲ್: ಇಲ್ಲಿನ ಎಪಿಎಂಸಿ ಪ್ರಾಂಗಣದ ಎಲೆಕ್ಟ್ರಾನಿಕ್ ತೂಕದ ಯಂತ್ರದ ಸೇವೆ (ವೇಬ್ರಿಡ್ಜ್) ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದು, ಡಿಜಿಟಲ್ ವೇಬ್ರಿಡ್ಜ್ಗೆ ಹೊಸ ಯಂತ್ರ ಅಳವಡಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ ರೈತರು ಹಾಗೂ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಬೆಳೆ ತೂಕ ಮಾಡಿಸಿಕೊಳ್ಳಲು ಬರುವ ರೈತರಿಗೆ ಮತ್ತು ಬೆಳೆ ಖರೀದಿಗೆ ನಿಲ್ಲುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ವೇಬ್ರಿಡ್ಜ್ ಸ್ಥಗಿತದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆದಾಯಕ್ಕೂ ಹಿನ್ನಡೆಯಾಗುತ್ತಿದೆ.

ದುಪ್ಪಟ್ಟು ಬೆಲೆ ತೆತ್ತು ಸಮೀಪದ ಖಾಸಗಿ ವೇಬ್ರಿಡ್ಜ್ಗಳಲ್ಲಿ ರೈತರು ಬೆಳೆಯನ್ನು ತೂಕ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಎಪಿಎಂಸಿ ತೂಕದ ಯಂತ್ರದ ವರದಿ ನಿಖರ ಎಂಬ ನಂಬಿಕೆಯನ್ನು ಇಲ್ಲಿನ ರೈತರು ಮತ್ತು ಮಾರುಕಟ್ಟೆಯ ವ್ಯಾಪಾರಸ್ಥರು ಹೊಂದಿದ್ದಾರೆ. ಹೀಗಾಗಿ, ಆದಷ್ಟು ಬೇಗ ಎಪಿಎಂಸಿ ಪ್ರಾಂಗಣದ ವೇಬ್ರಿಡ್ಜ್ ಚಾಲನೆಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

2006–07ರಲ್ಲಿ ಸ್ಥಾಪನೆಯಾದ ಎನ್ಲಾಕ್ ಮಾದರಿಯ ಇಲ್ಲಿನ ವೇಬ್ರಿಡ್ಜ್ 5 ವರ್ಷದ ಅವಧಿಗೆ ಗುತ್ತಿಗೆ ನೀಡುವ ಪದ್ಧತಿಯನ್ನು ಮಾರುಕಟ್ಟೆ ಸಮಿತಿ ಹೊಂದಿತ್ತು. ಯಂತ್ರ ಸ್ಥಗಿತಕ್ಕೂ ಮುನ್ನ ಬಹಿರಂಗ ಹರಾಜಿನಲ್ಲಿ ಪ್ರತಿ ತಿಂಗಳು ₹57,200 ಬಾಡಿಗೆಯಂತೆ ತೂಕದ ಯಂತ್ರ ಗುತ್ತಿಗೆ ನೀಡಲಾಗಿತ್ತು.

2024ರ ಜನವರಿಯಲ್ಲಿ ಮಾರುಕಟ್ಟೆ ಸಮಿತಿಯ ಎಂಜಿನಿಯರ್ ಭೇಟಿ ನೀಡಿ ಯಂತ್ರದ ಪರೀಶಿಲನೆ ನಡೆಸಿದ್ದರು. ಯಂತ್ರ ಹಳೆಯದಾಗಿದ್ದು, ಅದನ್ನು ತೆರವು ಮಾಡಿ ಹೊಸ ಯಂತ್ರ ಅಳವಡಿಸಬೇಕೆಂದು ವರದಿ ನೀಡಿದ್ದರು.

ರೈತರು ಮತ್ತು ವ್ಯಾಪಾರಸ್ಥರ ಬೇಡಿಕೆ ಮೇರೆಗೆ ಹೆಚ್ಚು ಸಾಮರ್ಥ್ಯದ ಯಂತ್ರ ಅಳವಡಿಕೆಯ ಮತ್ತೊಂದು ವರದಿ ಸಲ್ಲಿಕೆಯಾಗಿ, ₹ 17 ಲಕ್ಷದಲ್ಲಿ ಡಿಜಿಟಲ್ ವೇಬ್ರಿಡ್ಜ್ ಸ್ಥಾಪನೆಯ ಕಾಮಗಾರಿ ಆರಂಭಿಸಲು ಅಂತಿಮಗೊಂಡು ಕಳೆದ ವರ್ಷ ಜುಲೈನಲ್ಲಿ ಹಳೆಯ ಯಂತ್ರ ತೆರವು ಕಾರ್ಯ ಆರಂಭಿಸಲಾಗಿತ್ತು. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ಒಂದು ವರ್ಷ ಐದು ತಿಂಗಳು ಗತಿಸಿದರೂ ಡಿಜಿಟಲ್ ವೇಬ್ರಿಡ್ಜ್ ಕಾಮಗಾರಿ ಮುಗಿದಿಲ್ಲ.

‘ಹೊಸ ಯಂತ್ರದ ಸಾಮರ್ಥ್ಯಕ್ಕೆ ತಕ್ಕಂತೆ ಪ್ಲಾಟ್ಫಾರ್ಮ್ ಕೂಡ ಬದಲಾವಣೆ ಮಾಡಬೇಕಾಗಿತ್ತು. ಮತ್ತಷ್ಟು ಮಾರ್ಪಾಡು ಕೆಲಸಗಳಿಂದ ವಿಳಂಬವಾಗಿದೆ. ಸದ್ಯ ತಳಪಾಯ, ಪ್ಲಾಟ್ಫಾರ್ಮ್ ಕೆಲಸ ಪೂರ್ಣಗೊಂಡಿದೆ. ಕ್ಯೂರಿಂಗ್ ಅವಧಿ ಇದೆ. ಯಂತ್ರ ಅಳವಡಿಕೆ ಮತ್ತಿತರ ಕೆಲಸಗಳು ಇನ್ನು 15 ದಿನಗಳಲ್ಲಿ ಮುಕ್ತಾಯಗೊಳಿಸುವಂತೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಅರವಿಂದ ಸುಗಂಧಿ ತಿಳಿಸಿದ್ದಾರೆ.

‘ಹೊಸ ಯಂತ್ರದ ಕಾಮಗಾರಿ ನೆಪದಲ್ಲಿ ಒಂದೂವರೆ ವರ್ಷದಿಂದ ವೇಬ್ರಿಡ್ಜ್ ಬಂದ್ ಮಾಡಲಾಗಿದ್ದು, ಇದರಿಂದ ನಮ್ಮ ಬೆಳೆ ತೂಕ ಮಾಡಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕರಾರುವಕ್ಕಾದ ತೂಕಕ್ಕಾಗಿ ಇಲ್ಲಿನ ಯಂತ್ರವನ್ನೇ ಆಶ್ರಯಿಸಿದ್ದೇವೆ. ಇದರಿಂದ ರೈತರು ಮತ್ತು ಖರೀದಿಸುವ ವ್ಯಾಪಾರಸ್ಥರಿಗೆ ಮೋಸವಿಲ್ಲ. ಈಗ ಹೊಸದಾಗಿ ನಿರ್ಮಾಣಗೊಳ್ಳುವ ವೇಬ್ರಿಡ್ಜ್ ವ್ಯವಸ್ಥಿತವಾಗಿ ಸೇವೆಯಲ್ಲಿರಬೇಕು. ಉತ್ತಮ ನಿರ್ವಹಣೆಯ ಗುತ್ತಿಗೆದಾರರನ್ನು ನೇಮಿಸಿ ವೇಬ್ರಿಡ್ಜ್ ಹಸ್ತಾಂತರಿಸಬೇಕು’ ಎಂದು ರೈತ ಶಿವಲಿಂಗಪ್ಪ ಬೈಲಣ್ಣನವರ ಒತ್ತಾಯಿಸಿದರು.

ಮಾರುಕಟ್ಟೆ ಸಮಿತಿ ವೇಬ್ರಿಡ್ಜ್ ಸೇವೆ ದರ

6 ಚಕ್ರದ ವಾಹನಕ್ಕೆ ₹100 (ಖಾಲಿ ವಾಹನಕ್ಕೆ ₹ 50 ಮತ್ತು ಸರಕು ತುಂಬಿದ ನಂತರ ₹ 50)

10 ಚಕ್ರದ ವಾಹನಕ್ಕೆ ₹120 (₹60+₹60)

12 ಚಕ್ರ ಮೇಲ್ಪಟ್ಟ ವಾಹನಕ್ಕೆ ₹70+₹70 3 ಮತ್ತು 4 ಚಕ್ರ ಟ್ರಾಕ್ಟರ್ಗೆ ₹30+₹30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.