ಹಾವೇರಿ: ನುಡಿಜಾತ್ರೆಗೆ ‘ಏಲಕ್ಕಿ ಕಂಪಿನ ನಾಡು’ ಹಾವೇರಿ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಅಕ್ಷರದ ತೇರು ಎಳೆಯಲು ಆಗಮಿಸುತ್ತಿರುವ ಸಾಹಿತ್ಯಾಸಕ್ತರು ಮತ್ತು ಪ್ರವಾಸಿ ಪ್ರಿಯರನ್ನು ಜಿಲ್ಲೆಯ ವಿವಿಧ ತಾಣಗಳು ಕೈಬೀಸಿ ಕರೆಯುತ್ತಿವೆ.

ಶರಣರ ನಾಡು– ಭಾವೈಕ್ಯದ ಬೀಡು, ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ತವರೂರು ಎಂದೇ ಹೆಸರಾಗಿರುವ ಹಾವೇರಿ ಜಿಲ್ಲೆ ಅನೇಕ ರಮಣೀಯ ತಾಣಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಉತ್ತರ ಕರ್ನಾಟಕದ ಪ್ರವಾಸಕ್ಕೂ ಈ ಜಿಲ್ಲೆಯೇ ಹೆಬ್ಬಾಗಿಲು.

ಕನಕನ ಅಸ್ಮಿತೆ:ಸಂತಶ್ರೇಷ್ಠ ಕನಕದಾಸರ ಜನ್ಮಭೂಮಿ ಬಾಡ ಮತ್ತು ಕರ್ಮಭೂಮಿ ಎನಿಸಿರುವ ಕಾಗಿನೆಲೆ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ. ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರ ಅರಮನೆ ಮನೋಹರವಾಗಿದೆ. ಕನಕದಾಸರ ಜೀವನ ವೃತ್ತಾಂತವನ್ನು ಚಿತ್ರಗಳ ಮೂಲಕ ತೆರೆದಿಡಲಾಗಿದೆ.

ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿರುವ 138 ಎಕರೆಯಲ್ಲಿರುವ ಕನಕ ಥೀಮ್ ಪಾರ್ಕ್ ಕನಕದಾಸರ ಜೀವನದ ಘಟನಾವಳಿಗಳ ಶಿಲ್ಪಗಳನ್ನು ಒಳಗೊಂಡಿದೆ. ಶಿಲ್ಪವನ, ಹುಲ್ಲುಹಾಸು, ಸಂಗೀತ ಕಾರಂಜಿ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ.

ಭಾವೈಕ್ಯದ ಸಿರಿ ಷರೀಫಗಿರಿ:ಶಿಶುನಾಳ ಗ್ರಾಮವು ಕರ್ನಾಟಕದ ಕಬೀರನೆಂದೇ ಖ್ಯಾತರಾದ ಶಿಶುನಾಳ ಷರೀಫರ ಊರು. ಷರೀಫ ಹಾಗೂ ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ಮೂರ್ತಿಗಳು ಷರೀಫಗಿರಿಯಲ್ಲಿದ್ದು, ನಿತ್ಯವು ನೂರಾರು ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಸವಣೂರು ಪಟ್ಟಣದ ಹೊರವಲಯದಲ್ಲಿರುವ ಪ್ರಶಾಂತ ವಿಹಾರ ತಾಣವಾದ ‘ವಿಷ್ಣುತೀರ್ಥ’ದಲ್ಲಿ ಸುಮಾರು 600 ಚದರ ಅಡಿ ವಿಶಾಲವಾದ ತಟಾಕದ ಸುತ್ತ ಜಗಲಿ ಇದ್ದು, ಮುಸ್ಲಿಂ ಶೈಲಿಯ ಕಲ್ಲಿನ ಕಮಾನುಗಳ ಸ್ನಾನಘಟ್ಟವನ್ನು ಹೊಂದಿದೆ. ಒಂದು ಚಿಕ್ಕ ದೇಗುಲವಿದ್ದು, ‘ಪಾಪವಿನಾಶನ’ ಎಂಬ ಲಿಂಗವಿದೆ.

ಕೃಷ್ಣಮೃಗ ಅಭಯಾರಣ್ಯ, ನವಿಲುಧಾಮ:ರಾಣೆಬೆನ್ನೂರು ಪಟ್ಟಣದ ಹೊರವಲಯದ ಕೃಷ್ಣಮೃಗ ಅಭಯಾರಣ್ಯ ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ. 119 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದು, ಕೃಷ್ಣಮೃಗ, ತೋಳ, ಮುಂಗುಸಿ, ಕಾಡುಹಂದಿ, ಮುಳ್ಳುಹಂದಿ, ನವಿಲು ಮುಂತಾದ ಪ್ರಾಣಿ ಪಕ್ಷಿಗಳಿಗೆ ಸಂರಕ್ಷಿತ ಪ್ರದೇಶವಾಗಿದೆ. ಬಂಕಾಪುರದಲ್ಲಿ ರಾಷ್ಟ್ರಪಕ್ಷಿ ನವಿಲು ಸಂರಕ್ಷಿತ ಧಾಮವಿದೆ. ಇಲ್ಲಿ ನೂರಾರು ನವಿಲುಗಳು ಸ್ವಚ್ಚಂದವಾಗಿ ನಲಿದಾಡುವ ದೃಶ್ಯ ಕಾಣಬಹುದು.

ಆಕರ್ಷಕ ನಿಸರ್ಗ ತಾಣ:ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ರಟ್ಟೀಹಳ್ಳಿಯ ಮದಗ ಮಾಸೂರು ಕೆರೆ ಆಕರ್ಷಕ ನಿಸರ್ಗ ಪ್ರವಾಸಿ ತಾಣವಾಗಿದೆ. ಕೆರೆ ಮೈದುಂಬಿ ಹರಿದರೆ ಸೃಷ್ಟಿಯಾಗುವ ಜಲಪಾತವನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಾರೆ. ಹಿರೇಕೆರೂರು ತಾಲ್ಲೂಕಿನ ದುರ್ಗಾದೇವಿ ಕೆರೆ ಹಾಗೂ ಹಾವೇರಿ ನಗರದ ಹೊರವಲಯದ ಹೆಗ್ಗೇರಿ ಕೆರೆಯ ವೀಕ್ಷಣೆ ಅವರ್ಣನೀಯ ಅನುಭವ ನೀಡುತ್ತದೆ. ಹಿರೇಕೆರೂರು ತಾಲ್ಲೂಕಿನ ಅಬಲೂರು ತ್ರಿಪದಿ ಕವಿ ಸರ್ವಜ್ಞ ನೆಲೆಸಿದ್ದ ಊರು ಎಂಬ ಪ್ರತೀತಿ ಇದ್ದು, ಸುಂದರವಾದ ಸರ್ವಜ್ಞನ ಮೂರ್ತಿ ಗಮನಸೆಳೆಯುತ್ತದೆ.

ಶಿಲ್ಪಕಲೆಗಳ ಪ್ರಯೋಗಶಾಲೆ:ಗೊಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ಕಲಾವಿದ ಪ್ರೊ.ಟಿ.ಬಿ.ಸೊಲಬಕ್ಕನವರ ಕನಸಿನ ಕೂಸು ಹಾಗೂ ಶಿಲ್ಪಕಲಾಕೃತಿಗಳ ಪ್ರಯೋಗಶಾಲೆ. ಗ್ರಾಮೀಣ ಸೊಗಡಿನ ಈ ತಾಣ 8 ವಿಶ್ವದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ತಡಸ ಸಮೀಪದ ‘ಅಗಡಿ ತೋಟ’ ಕೂಡ ಕೃಷಿ ಧ್ಯಾನ ಮತ್ತು ಮನರಂಜನೆಯ ಯಾನಕ್ಕೆ ಹೇಳಿ ಮಾಡಿದ ಸ್ಥಳವಾಗಿದೆ.

‘ಮರಿ ಕಲ್ಯಾಣ’ವೆಂಬ ಖ್ಯಾತಿ
ಜಗದ ಕಣ್ಣು ತೆರೆಯಿಸಿದ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ, ವಿದುಷಿ ಗಂಗೂಬಾಯಿ ಹಾನಗಲ್ಲ ಮುಂತಾದವರು ಹಾವೇರಿ ಭೂಮಿಯನ್ನು ಗಾನ ಭೂಮಿಯನ್ನಾಗಿಸಿದರು. ಹಾನಗಲ್ಲಿನ ಕುಮಾರಸ್ವಾಮಿ, ಹುಕ್ಕೇರಿಮಠದ ಶಿವಬಸವ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರು ತ್ರಿವಿಧ ದಾಸೋಹ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಹುಕ್ಕೇರಿಮಠ, ಹೊಸಮಠ, ಸಿಂದಗಿಮಠ, ವಿರಕ್ತಮಠ, ಐರಿಣಿ ಮಠ, ದೊಡ್ಡಹುಣಸೆಮರದ ಹುಣಸಿಕಟ್ಟಿ ಮಠ ಸೇರಿದಂತೆ 63 ಮಠಗಳಿಗೆ ನೆಲೆಯಾಗಿರುವ ಹಾವೇರಿ ಜಿಲ್ಲೆ ‘ಮರಿ ಕಲ್ಯಾಣ’ವೆಂದೇ ಪ್ರಖ್ಯಾತಿ ಪಡೆದಿದೆ.

ಶಿಲ್ಪಕಲೆಯ ತೊಟ್ಟಿಲುಈ ದೇಗುಲಗಳು
ಹಾವೇರಿ ನಗರದ ಪುರಸಿದ್ಧೇಶ್ವರ ದೇಗುಲ, ಹಾನಗಲ್ ಪಟ್ಟಣದಲ್ಲಿರುವ ತಾರಕೇಶ್ವರ ಮತ್ತು ಬಿಲ್ಲೇಶ್ವರ ದೇವಸ್ಥಾನ, ಹರಳಹಳ್ಳಿಯ ಸಿದ್ಧೇಶ್ವರ– ಸೋಮೇಶ್ವರ ದೇವಸ್ಥಾನ, ವರದಾ–ತುಂಗಾ ನದಿಯ ಸಂಗಮದಲ್ಲಿರುವ ಗಳಗನಾಥದ ಗಳಗೇಶ್ವರ, ರಟ್ಟೀಹಳ್ಳಿಯ ಕದಂಬೇಶ್ವರ ದೇಗುಲ, ಚೌಡದಾನಪುರದ ಮುಕ್ತೇಶ್ವರ, ಬಂಕಾಪುರದ ನಗರೇಶ್ವರ ದೇವಸ್ಥಾನಗಳು ಶಿಲ್ಪಕಲೆಯಿಂದ ಖ್ಯಾತಿ ಪಡೆದಿವೆ.

ಸವಣೂರು ತಾಲ್ಲೂಕು ಕಾರಡಗಿಯ ವೀರಭದ್ರೇಶ್ವರ ದೇವಸ್ಥಾನ, ದೇವರಗುಡ್ಡದ ಮಾಲತೇಶ ದೇವಸ್ಥಾನ, ಕದರಮಂಡಲಗಿಯ ಕಾಂತೇಶ ದೇವಸ್ಥಾನ, ಸಾತೇನಹಳ್ಳಿಯ ಶಾಂತೇಶ ದೇವಸ್ಥಾನ, ಕಾಗಿನೆಲೆಯ ಆದಿಕೇಶವ ದೇವಸ್ಥಾನ ಭಕ್ತರ ನೆಚ್ಚಿನ ತಾಣಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.