ಹಾವೇರಿ ಜಿಲ್ಲೆಯ ಘಾಳಪೋಜಿ ಗ್ರಾಮದ ರಸ್ತೆ ಹದಗೆಟ್ಟಿರುವುದು
ಹಾವೇರಿ ತಾಲ್ಲೂಕಿನ ದಿಡಗೂರು ಗ್ರಾಮದಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು ಬೃಹತ್ ಗುಂಡಿಗಳು ಬಿದ್ದು ನೀರು ನಿಂತುಕೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಬಸ್ ನಿಲ್ದಾಣ ಎದುರಿನ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ನೀರು ನಿಂತಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾಯರ್ ಬಂಕ್ ಬಳಿಯ ರಸ್ತೆಯ ದುಸ್ಥಿತಿ
ತಿಳವಳ್ಳಿ–ಹಾನಗಲ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ಸೈಕಲ್‌ನಿಂದ ಬಿದ್ದು ಚಿಲ್ಲಾಪಿಲ್ಲಿಯಾದ ಅಡಿಕೆಗಳನ್ನು ರೈತರೊಬ್ಬರು ಆರಿಸುತ್ತಿರುವುದು
ಹಾವೇರಿ ತಾಲ್ಲೂಕಿನ ನೆಗಳೂರು ಗ್ರಾಮದ ರಸ್ತೆಯಲ್ಲಿ ಗುಂಡಿಗಳು ಬಿದ್ದು ಇಡೀ ರಸ್ತೆ ಹಾಳಾಗಿದೆ
ಹಾವೇರಿ ಜಿಲ್ಲೆಯ ಬಿದರಗಡ್ಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ನೀರು ನಿಂತಿರುವುದು
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ದೇವಗಿರಿ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದು ನೀರು ನಿಂತುಕೊಂಡು ಜನರ ಓಡಾಟಕ್ಕೆ ತೊಂದರೆಯಾಗಿದೆ

ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಹಾನಗಲ್‌ನ ರಾಣಿ ಚನ್ನಮ್ಮ ವೃತ್ತದ ರಸ್ತೆಯೇ ತೀರಾ ಹದಗೆಟ್ಟಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ತಿರುಗಿಯೂ ನೋಡುತ್ತಿಲ್ಲ
ಸುಭಾಷ್ ಎಂ. ಹಾನಗಲ್ ನಿವಾಸಿ
ರಸ್ತೆ ನೋಡಿ ನಮಗೆ ನಾಚಿಕೆ ಬರುತ್ತಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುವರು ಹೆಚ್ಚಾಗಿದ್ದಾರೆ. ಮತ ಕೇಳಲು ಬರುವವರು ರಸ್ತೆ ನೋಡಲು ಬರುತ್ತಿಲ್ಲ
ಚಂದ್ರಪ್ಪ ಘಾಳಪೋಜಿ ನಿವಾಸಿ
ರಸ್ತೆ ಹದಗೆಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡುತ್ತಿಲ್ಲ. ಹೊಸ ರಸ್ತೆ ಮಾಡಿಸುವುದಾಗಿ ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ
ರಬ್ಬಾನಿ ನಾಶಿಪುಡಿ ತಿಳವಳ್ಳಿ ನಿವಾಸಿ
ಜಿಲ್ಲೆಯ ಶಾಸಕರು ಅಧಿಕಾರಿಗಳು ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ. ಅವರಿಗೆ ಗುಂಡಿಗಳಿಂದ ಏನು ಆಗುವುದಿಲ್ಲ. ಸಾಮಾನ್ಯ ಜನರೇ ರಸ್ತೆಯಿಂದ ಕಷ್ಟ ಅನುಭವಿಸಿ ಬೇಸತ್ತಿದ್ದಾರೆ
ಶಂಕರ ಎನ್. ಹಿರೇಕೆರೂರು ನಿವಾಸಿ