ಹಾವೇರಿ: ಮೆಕ್ಕೆಜೋಳ ಖರೀದಿಸಲು ಜಿಲ್ಲೆಯ ಐದು ಕಡೆಗಳಲ್ಲಿ ಕೇಂದ್ರ ತೆರೆದಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ಮಂಗಳವಾರದಿಂದ ನೋಂದಣಿ ಆರಂಭಿಸಿದೆ.

‘ಪ್ರತಿಯೊಬ್ಬ ರೈತರಿಂದ ಕ್ವಿಂಟಲ್ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಕೆಎಂಎಫ್ ಕೇಂದ್ರಗಳಲ್ಲಿ ಸೋಮವಾರ 20 ಕ್ವಿಂಟಲ್ ಖರೀದಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಸರ್ಕಾರದ ಆದೇಶ ಪಾಲಿಸದ ಕೆಎಂಎಫ್ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡಿತ್ತು.

ಅದರಿಂದ ಎಚ್ಚೆತ್ತ ಕೆಎಂಎಫ್ ಅಧಿಕಾರಿಗಳು, ನೋಂದಣಿ ಸಾಫ್ಟ್ವೇರ್ ಸಮಸ್ಯೆಯನ್ನು ಸರಿಪಡಿಸಿ ಮಂಗಳವಾರದಿಂದಲೇ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಆರಂಭಿಸಿದ್ದಾರೆ.

ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ಪ್ರಧಾನ ಆಡಳಿತ ಕಚೇರಿ, ರಾಣೆಬೆನ್ನೂರಿನ ಎಪಿಎಂಸಿ ಸಮುದಾಯ ಭವನ, ಶಿಗ್ಗಾವಿಯ ಎಪಿಎಂಸಿ ಕೆಎಂಎಫ್ ಉಪಕಚೇರಿ, ಹಿರೇಕೆರೂರಿನ ಕೆಎಂಎಫ್ ಶಿಥಲೀಕರಣ ಕೇಂದ್ರ, ಹಾನಗಲ್ನ ಆಡೂರು ಹಾಲು ಉತ್ಪಾದಕರ ಸಂಘಗಳಲ್ಲಿ ತೆರೆದಿರುವ ಕೇಂದ್ರಗಳಲ್ಲಿ ಮಂಗಳವಾರದ ಅಂತ್ಯಕ್ಕೆ 798 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

‘ಸರ್ಕಾರದ ಹಳೇ ಆದೇಶದಂತೆ 20 ಕ್ವಿಂಟಲ್ ನೋಂದಣಿಗೆ ಸಾಫ್ಟ್ವೇರ್ನಲ್ಲಿ ಅವಕಾಶವಿತ್ತು. 50 ಕ್ವಿಂಟಲ್ ಖರೀದಿ ಬಗ್ಗೆ ಸೂಚನೆ ಬರುತ್ತಿದ್ದಂತೆ ಸಾಫ್ಟ್ವೇರ್ ನವೀಕರಣ ಮಾಡಲಾಗಿದೆ. ಮಂಗಳವಾರದಿಂದಲೇ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್.ಎಂ. ತಿಳಿಸಿದರು.

ಧಾರವಾಡ ಹಾಗೂ ಶಿಕಾರಿಪುರದಲ್ಲಿರುವ ಪಶು ಆಹಾರ ತಯಾರಿಕಾ ಘಟಕಗಳಿಗೆ ಪೂರೈಸಲು ಮೆಕ್ಕೆಜೋಳ ಖರೀದಿ ಆರಂಭಿಸಲಾಗಿದೆ. ನೋಂದಣಿ ಪ್ರಕ್ರಿಯೆ ಮುಗಿದ ನಂತರ, ರೈತರು ಯಾವ ಸ್ಥಳದಲ್ಲಿ ಮೆಕ್ಕೆಜೋಳ ಕೊಂಡೊಯ್ಯಬೇಕು ಎಂಬುದು ಗೊತ್ತಾಗಲಿದೆ.

1,407 ರೈತರ ನೋಂದಣಿ: ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತದಿಂದ ಎಂಟು ಕೇಂದ್ರಗಳಲ್ಲಿ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಮಂಗಳವಾರದ ಅಂತ್ಯಕ್ಕೆ 1,407 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

‘ರಾಣೆಬೆನ್ನೂರು ತಾಲ್ಲೂಕಿನ ಕಮದೋಡದಲ್ಲಿ 198, ಇಟಗಿಯಲ್ಲಿ 225, ಕರೂರಿನಲ್ಲಿ 53, ಹಾವೇರಿ ತಾಲ್ಲೂಕಿನ ಹಾವನೂರಿನಲ್ಲಿ 99, ಗುತ್ತಲದಲ್ಲಿ 168, ನೆಗಳೂರಿನಲ್ಲಿ 332 ಹಾಗೂ ಬೆಳವಗಿಯಲ್ಲಿ 332 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲೆಯ 13 ಕೇಂದ್ರಗಳಲ್ಲಿ ನೋಂದಣಿ ಹೇಗೆ?

ಹಾವೇರಿ ಜಿಲ್ಲೆಯ ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಖರೀದಿ ಮಾಡಲು 13 ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಪಶು ಆಹಾರ ತಯಾರಿಕೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ಖರೀದಿ ಮಾಡಲು ಕೆಎಂಎಫ್ ವತಿಯಿಂದ, ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ಪ್ರಧಾನ ಆಡಳಿತ ಕಚೇರಿ, ರಾಣೆಬೆನ್ನೂರಿನ ಎಪಿಎಂಸಿ ಸಮುದಾಯ ಭವನ, ಶಿಗ್ಗಾವಿಯ ಎಪಿಎಂಸಿ ಕೆಎಂಎಫ್ ಉಪಕಚೇರಿ, ಹಿರೇಕೆರೂರಿನ ಕೆಎಂಎಫ್ ಶಿಥಲೀಕರಣ ಕೇಂದ್ರ, ಹಾನಗಲ್ನ ಆಡೂರು ಹಾಲು ಉತ್ಪಾದಕರ ಸಂಘಗಳಲ್ಲಿ ಕೇಂದ್ರ ತೆರೆಯಲಾಗಿದೆ.

ಡಿಸ್ಟಿಲರಿಗಳಿಗೆ ಮೆಕ್ಕೆಜೋಳ ಪೂರೈಸಲು ಜಿಲ್ಲಾಡಳಿತದಿಂದ ರಾಣೆಬೆನ್ನೂರು ತಾಲ್ಲೂಕಿನ ಕಮದೋಡ, ಇಟಗಿ, ಕರೂರು, ಹಾವೇರಿ ತಾಲ್ಲೂಕಿನ ಹಾವನೂರ, ಗುತ್ತಲ, ನೆಗಳೂರ, ಬೆಳವಗಿಯಲ್ಲಿ ಕೇಂದ್ರ ಆರಂಭಿಸಲಾಗಿದೆ.

‘ಜಿಲ್ಲೆಯ ರೈತರು ತಾವು ಬೆಳೆದಿರುವ ಮೆಕ್ಕೆಜೋಳದ ಮಾದರಿಯನ್ನು (ತಲಾ 1 ಕೆ.ಜಿ.) ನೋಂದಣಿ ಕೇಂದ್ರಕ್ಕೆ ತರಬೇಕು. ಆಧಾರ್ ಕಾರ್ಡ್, ಎಫ್ಐಡಿ ನಂಬರ್, ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆ ಪುಸ್ತಕ, ಪಹಣಿ ಪತ್ರ (ಆರ್ಟಿಸಿ) ದಾಖಲೆಗಳನ್ನೂ ಸಲ್ಲಿಸಬೇಕು’ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.