ಹಾವೇರಿ: ಜಿಲ್ಲೆಯ ಐವರು ಇನ್ಸ್ಪೆಕ್ಟರ್ ಸೇರಿದಂತೆ ರಾಜ್ಯದ 131 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿಯು ಸೋಮವಾರ ಆದೇಶ ಹೊರಡಿಸಿದೆ.

ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರವೀಣ್ಕುಮಾರ ವಿ. ಅವರನ್ನು ಸಿರಾ ಶಹರ ಠಾಣೆಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಧಾರವಾಡ ಶಹರ ಠಾಣೆಯ ನಾಗಯ್ಯ ಸಿ. ಕಾಡದೇವರು ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಣೆಬೆನ್ನೂರು ಶಹರ ವೃತ್ತದ ಇನ್ಸ್ಪೆಕ್ಟರ್ ಶಂಕರ್ ಎಸ್.ಕೆ. ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಚಿತ್ರದುರ್ಗ ಸೈಬರ್ ಕ್ರೈಂ ಠಾಣೆಯ ಎನ್. ವೆಂಕಟೇಶ್ ಅವರನ್ನು ವರ್ಗಾಯಿಸಲಾಗಿದೆ.

ಹಿರೇಕೆರೂರು ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಬಸವರಾಜ ಪಿ.ಎಸ್. ಅವರನ್ನು ಹಾವೇರಿಯ ಡಿಎಸ್ಬಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿದ್ದ ಮಂಜುನಾಥ ಪಂಡಿತ್ ಎನ್. ಅವರನ್ನು ಹಿರೇಕೆರೂರು ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಬ್ಯಾಡಗಿ ವೃತ್ತದ ಮಹಾಂತೇಶ ಕೆ. ಲಂಬಿ ಅವರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಚಿತ್ರದುರ್ಗ ಹೊಳಲ್ಕೆರೆ ವೃತ್ತದ ಮಾರ್ತಾಂಡಪ್ಪ ಬಿ. ಚಿಕ್ಕಣ್ಣನವರ ಅವರನ್ನು ಬ್ಯಾಡಗಿ ವೃತ್ತದ ಇನ್ಸ್ಪೆಕ್ಟರ್ ಆಗಿ ವರ್ಗಾಯಿಸಲಾಗಿದೆ.

ಹಾವೇರಿಯ ಡಿ.ಎಸ್.ಬಿ ಇನ್ಸ್ಪೆಕ್ಟರ್ ಮುತ್ತನಗೌಡ ಗೌಡಪ್ಪಗೌಡರ ಅವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ಠಾಣೆಗೆ ವರ್ಗಾಯಿಸಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.