ಹಾವೇರಿ: ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವ್ಹಿ.ಕೃ. ಗೋಕಾಕ ಅವರ 115ನೇ ಜನ್ಮ ದಿನಾಚರಣೆ ನಿಮಿತ್ತ ಸವಣೂರಿನಲ್ಲಿ ಆಗಸ್ಟ್ 17ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಜಿಲ್ಲಾ ಗುರುಭವನ ಬಳಿ ಇರುವ ವಿ.ಕೃ. ಗೋಕಾಕ ಅವರ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿದ ಅವರು, ‘ಗೋಕಾಕ ಅವರ ಜನ್ಮ ದಿನಾಚರಣೆ ನಿಮಿತ್ತ ಇಂದು ಪುತ್ಥಳಿಗೆ ಮಾಲಾರ್ಪಾಣೆ ಮಾಡಿ ಗೌರವ ಸಲ್ಲಿಸಲಾಗಿದೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಸಾಹಿತಿ ಸತೀಶ ಕುಲಕರ್ಣಿ, ಪಿ.ಟಿ. ಲಕ್ಕಣ್ಣನವರ ಅವರು ಗೋಕಾಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಸರ್ವಶ್ರೀ ವಿಭೂತಿಶೆಟ್ಟಿ, ಲಯನ್ಸ ಅಧ್ಯಕ್ಷ ಸುಭಾಷ ಹುಲ್ಯಾಳದ, ಕಾರ್ಯದರ್ಶಿ ವಿರೂಪಾಕ್ಷ ಹಾವನೂರ, ಡಾ. ಅಂಬಿಕಾ ಹಂಚಾಟೆ ಇದ್ದರು.