ಹಾವೇರಿ: ‘ರೈತರ ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದ ವೇಳೆ ವೃದ್ಧೆಯೊಬ್ಬರ ಬಗ್ಗೆ ಮೊಬೈಲ್ ಫೋನ್ನಲ್ಲಿ ಮಾತನಾಡಿದರು’ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಮಹಿಳೆಯೊಬ್ಬರಿಗೆ ₹ 45 ಸಾವಿರ ದಂಡ ವಿಧಿಸಿದ್ದಾರೆ. ಅದನ್ನು ಪಾವತಿಸದ ಕಾರಣ ಬಹಿಷ್ಕಾರ ಹಾಕಿದ್ದಾರೆ.

ಜಿಲ್ಲೆಯ ಹಾನಗಲ್ ತಾಲ್ಲೂಕಿನ ಜಾನಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಅನುಷಾ ಲಮಾಣಿ ಎಂಬುವರು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ.

‘ಗ್ರಾಮಸ್ಥರು ನನ್ನನ್ನು ಯಾವುದಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಕೆಲಸಕ್ಕೂ ಕರೆಯುತ್ತಿಲ್ಲ. ಓಡಾಡಲು ಸಹ ಬಿಡುತ್ತಿಲ್ಲ. ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇನೆ. ಗ್ರಾಮಸ್ಥರಿಂದ ನನಗೆ ಅನ್ಯಾಯವಾಗಿದೆ. ಈ ಬಗ್ಗೆ ಹಾನಗಲ್ ಠಾಣೆಗೆ ದೂರು ನೀಡಿದ್ದು, ಅಲ್ಲಿಯ ಪೊಲೀಸರಿಂದಲೂ ನ್ಯಾಯ ಸಿಕ್ಕಿಲ್ಲ’ ಎಂದು ಅನುಷಾ ಅಳಲು ತೋಡಿಕೊಂಡಿದ್ದಾರೆ.

ಕೂಲಿ ನಂಬಿ ಜೀವನ: ‘ಕೃಷಿ ಕೂಲಿ ನಂಬಿ ಜೀವನ ನಡೆಸುತ್ತಿದ್ದೇನೆ. ನನಗೆ ಒಬ್ಬಳೇ ಮಗಳಿದ್ದು, ಹಾನಗಲ್ನಲ್ಲಿ ಹಾಸ್ಟೆಲ್ನಲ್ಲಿದ್ದಾಳೆ. ಗ್ರಾಮದ ರೈತರ ಜಮೀನಿಗೆ ಹೋಗಿ ನಿತ್ಯವೂ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ರೈತರೊಬ್ಬರ ಜಮೀನಿಗೆ ಹೋದಾಗ, ಅಲ್ಲಿಂದ ವೃದ್ಧೆಯೊಬ್ಬರ ಮೊಬೈಲ್ಗೆ ಕರೆ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ. ನಂತರ, ವೃದ್ಧೆಗೆ ಪರಿಚಯದವರಿಗೆ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಿದ್ದರು. ವೃದ್ಧೆಯ ಬಗ್ಗೆ ಅವರ ಜೊತೆ ಮಾತನಾಡಿದ್ದೆ’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

‘ವೃದ್ಧೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಾ’ ಎಂದು ಆರೋಪಿಸಿದ್ದ ಗ್ರಾಮಸ್ಥರು, ನನಗೆ ಹಾಗೂ ನನ್ನ ಜೊತೆ ಮಾತನಾಡಿದ್ದ ಮಹಿಳೆಗೆ ಬೈದಿದ್ದರು. ನನಗೆ ₹45 ಸಾವಿರ ಹಾಗೂ ಇನ್ನೊಬ್ಬ ಮಹಿಳಗೆ ₹ 40 ಸಾವಿರ ದಂಡ ಹಾಕಿದ್ದಾರೆ. ಆ ಮಹಿಳೆ ಹಣ ನೀಡುವುದಾಗಿ ಹೇಳಿದ್ದರಿಂದ, ಆಕೆಯನ್ನು ಎಲ್ಲರೂ ಮಾತನಾಡಿಸುತ್ತಿದ್ದಾರೆ. ಹಣ ಕೊಡಲು ನಿರಾಕರಿಸಿದ್ದಕ್ಕಾಗಿ ನನ್ನ ಜೊತೆ ಯಾರೂ ಮಾತನಾಡುತ್ತಿಲ್ಲ. ನನ್ನ ಸಮಾಜದ ಹಿರಿಯರೇ ನನ್ನನ್ನು ಬಹಿಷ್ಕಾರ ಹಾಕಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ಬಂದಿದ್ದೇನೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘ಗ್ರಾಮದ ಸೋಮನಾಥ, ವಸಂತ, ಉಮ್ಮಣ್ಣ, ಪೋಮಣ್ಣ ಹಾಗೂ ಇತರರು ಸೇರಿ ದಂಡ ಹಾಕಿದ್ದಾರೆ. ಹಾನಗಲ್ ಠಾಣೆಯವರು, ಸಮಸ್ಯೆ ಸರಿ ಮಾಡುವುದಾಗಿ ಹೇಳಿ ಸುಮ್ಮನಾಗಿದ್ದಾರೆ. ಒಂಟಿಯಾಗಿ ವಾಸವಿರುವ ನಾನು, ಇಂದಿಗೂ ಭಯದಲ್ಲಿ ಬದುಕುತ್ತಿದ್ದೇನೆ. ನನಗೆ ದಂಡ ವಿಧಿಸಿ, ಬಹಿಷ್ಕಾರ ಹಾಕಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.