ಬ್ಯಾಡಗಿ: ಬ್ಯಾಡಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರದಿಂದ ಪ್ರತಿದಿನ ಮಧ್ಯಾಹ್ನ ಸತತ ಎರಡು ಗಂಟೆ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಂಜಾನೆ ಹೊತ್ತು ಆಗಾಗ ಸುರಿಯುವ ಮಳೆ ಮಧ್ಯಾಹ್ನದ ವೇಳೆ ಬಿಟ್ಟೂ ಬಿಡದೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದಾಗಿ ಶಾಲೆಗೆ ತೆರಳಿದ ಮಕ್ಕಳು ಸಂಜೆ ಮಳೆಯಲ್ಲಿಯೇ ಮನೆಗೆ ಸಾಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಲೋಕೋಪಯೋಗಿ ಇಲಾಖೆ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದ ಕಾರಣ ಮಳೆ ಬಂದರೆ ರಸ್ತೆ ಕೆರೆಯಂತಾಗುತ್ತಿದೆ. ಜನರು ಅಡ್ಡಾಡದೇ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ ಎನ್ನುವುದು ಅಲ್ಲಿಯ ವ್ಯಾಪಾರಿಗಳ ಅಳಲು.

ಎರಡು ಮನೆಗಳಿಗೆ ಹಾನಿ: ನಾಲ್ಕು ದಿನಗಳಿಂದ ಮಧ್ಯಾಹ್ನದ ಹೊತ್ತಿಗೆ ಮಳೆ ನಿರಂತರವಾಗಿ ಸುರಿದ ಪರಿಣಾಮ ಪಟ್ಟಣದಲ್ಲಿ ಒಂದು, ತಾಲ್ಲೂಕಿನ ಶಂಕ್ರಿಪುರ ಗ್ರಾಮದಲ್ಲಿ ಮತ್ತೊಂದು ಮನೆಗೆ ಭಾಗಶಃ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ಬೆಳೆ ಹಾನಿ ತಡೆಗೆ ಸಲಹೆ: ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ವಿವಿಧ ಬೆಳವಣಿಗೆಯ ಹಂತದಲ್ಲಿರುವ ಗೋವಿನಜೋಳ, ಹತ್ತಿ ಮುಂತಾದ ಬೆಳೆಗಳಿಗೆ ಹಾನಿಯಾದಂತೆ ರೈತರು ತಮ್ಮ ಹೊಲದಲ್ಲಿ ಬಸಿ ಗಾಲುವೆ ತೆಗೆದು ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಜುಲೈನಲ್ಲಿ ಇದುವರೆಗೂ 9.6 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 11ರಷ್ಟು ಹೆಚ್ಚು ಸುರಿದಿದೆ.

ತಾಲ್ಲೂಕಿನಲ್ಲಿ 2025–26 ಸಾಲಿನಲ್ಲಿ ಒಟ್ಟಾರೆ 5,148 ಮೆ.ಟನ್ ಯೂರಿಯಾ, 1,567 ಮೆ.ಟನ್ ಡಿಎಪಿ, 152ಮೆ ಟನ್ ಎಂಒಪಿ ಹಾಗೂ 1,987 ಮೆ.ಟನ್ ಕಾಂಪ್ಲೆಕ್ಸ್ ಗೊಬ್ಬರವನ್ನು ರೈತರಿಗೆ ಸೊಸೈಟಿ ಮೂಲಕ ವಿತರಣೆ ಮಾಡಲಾಗಿದೆ. ಇನ್ನೂ 265 ಮೆ.ಟನ್ ಯೂರಿಯಾ, 185 ಮೆ.ಟನ್ ಡಿಎಪಿ, 322 ಮೆ.ಟನ್ ಎಂಒಪಿ ಹಾಗೂ 355 ಮೆ.ಟನ್ ಕಾಂಪ್ಲೆಕ್ಸ್ ಗೊಬ್ಬರದ ದಾಸ್ತಾನು ಇದೆ. ಮಳೆ ನಿಂತ ಬಳಿಕ ರೈತರು ಯೂರಿಯಾ ಗೊಬ್ಬರವನ್ನು ಶಿಫಾರಸಿನ ಪ್ರಮಾಣದಲ್ಲಿ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.