ಶುಕ್ರವಾರ, ಆಗಸ್ಟ್ 12, 2022
21 °C

ಸಾಹಿತ್ಯಕ್ಕೆ ಕನಕದಾಸರಿಂದ ಅಪಾರ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಕನಕದಾಸರ ಜಯಂತಿ ಅಂಗವಾಗಿ ಗುರುವಾರ ಇಲ್ಲಿನ ಭಕ್ತ ಕನಕದಾಸ ಉದ್ಯಾನದಲ್ಲಿನ ಕನಕದಾಸರ ಪ್ರತಿಮೆಗೆ ತಾಲ್ಲೂಕು ಆಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ್ ಪಿ.ಎಸ್.ಎರ್ರಿಸ್ವಾಮಿ, ಜನರನ್ನು ಪ್ರಭಾವಿಸುಂತಹ ರಚನೆಗಳ ಮೂಲಕ ದಾಸ ಸಾಹಿತ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯ್ದ ಮಹಾನ್ ದಾರ್ಶನಿಕ ಭಕ್ತ ಕನಕದಾಸ. ಅವರ ಕೃತಿಗಳು ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ದಾಸರಲ್ಲಿ ಶ್ರೇಷ್ಠ ದಾಸರಾಗಿ ಕನಕದಾಸರು ಸಮಾನತೆ ಸಾರಿದವರು. ಉತ್ತಮ ಸಮಾಜ ನಿರ್ಮಾಣಕ್ಕೆ ಭಕ್ತಿ ಮಾರ್ಗ ಬೇಕು. ಭಕ್ತಿಯಿಂದ ದೇವರು ಒಲಿಯುತ್ತಾನೆ ಎಂದು ಪ್ರತಿಪಾದಿಸಿದವರು ಎಂದರು.

ತಾ.ಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಪುರಸಭೆ ಅಧ್ಯಕ್ಷ ಖುರ್ಷಿದ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಹರಿಹರ, ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ದೊಡ್ಡಕುರುಬರ, ಮುಖಂಡರಾದ ಭೋಜರಾಜ ಕರೂದಿ, ನಿಂಗಪ್ಪ ಗಾಜಿ, ಶಂಭು ಮಲ್ಲಿಗ್ಗಾರ, ಮಂಜುನಾಥ ಸುಣಗಾರ, ದಾನಪ್ಪ ಗಂಟೇರ, ಕಲ್ಯಾಣಕುಮಾರ ಶೆಟ್ಟರ, ರಾಜು ಗೌಳಿ, ಹಾಶಂಪೀರ್‌ ಇನಾಂದಾರ್‌, ರಾಘವೇಂದ್ರ ತಹಸೀಲ್ದಾರ್‌, ಜಿ.ಬಿ.ದೇಸಾಯಿ, ರಾಮಚಂದ್ರ ಹೊಸಮನಿ, ಗುಡ್ಡಪ್ಪ ಕುರುಬರ, ನಿಂಗಪ್ಪ ದೇವಗಿರಿ, ನಿಂಗಪ್ಪ ಕಾಶಂಬಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.