ರಾಣೆಬೆನ್ನೂರು: ‘ಜನಸಾಮಾನ್ಯರಲ್ಲಿ ಕಾನೂನಿನ ಅರಿವಿನ ಕೊರತೆಯಿರುವುದರಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ’ ಎಂದು ಎಚ್.ಪಿ. ಬಣಕಾರ ಹೇಳಿದರು.
ಇಲ್ಲಿನ ವಿದ್ಯಾನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನಕ್ಕೆ ಅವಶ್ಯಕವಾಗಿರುವ ಕಾನೂನುಗಳ ಕುರಿತು ಮೊದಲು ತಿಳಿದುಕೊಳ್ಳಬೇಕು. ಕಾನೂನು ಅರಿವಿನಿಂದ ಸುಂದರ ಜೀವನ ನಡೆಸಬಹುದು. ವರದಕ್ಷಿಣೆ ನಿರ್ಮೂಲನೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ, ಬಾಲ್ಯ ವಿವಾಹ ತಡೆ, ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು’ ಎಂದರು.
‘ಯಾವುದೇ ಅನ್ಯಾಯ, ಕಿರುಕುಳ, ಅಪಘಾತವಾದರೆ ಕೂಡಲೇ 1098 ಸಹಾಯವಾಣಿಗೆ ಕರೆಮಾಡಿ ದೂರು ಸಲ್ಲಿಸಬಹುದು’ ಎಂದರು.
ಮುಖ್ಯ ಶಿಕ್ಷಕಿ ಜೆ.ಸಿ. ಹೊಸಮನಿ, ಪರಮೇಶ ದೊಡ್ಡಮನಿ, ಎಚ್.ಆರ್. ತೆವರಿ, ಎಂ.ಡಿ.ಶಿವಾನಂದ, ಜ್ಯೋತಿ, ಶಾಂತರಾಜ ಇದ್ದರು.