ಶನಿವಾರ, ಜನವರಿ 28, 2023
15 °C
ಪುಸ್ತಕ ಖರೀದಿಗೆ ಮುಗಿಬಿದ್ದ ಓದುಗರು: ಆನ್‌ಲೈನ್‌ ಪಾವತಿ ಸ್ಥಗಿತ

ಪುಸ್ತಕ ಮಾರಾಟಕ್ಕೆ ನೆಟ್‌ವರ್ಕ್‌ ಅಡ್ಡಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 300 ಪುಸ್ತಕ ಮಳಿಗೆಗಳಲ್ಲಿ ಸಾಹಿತ್ಯಾಸಕ್ತರು ಕಿಕ್ಕಿರಿದು ತುಂಬಿದ್ದಾರೆ. ಆದರೆ, ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಆನ್‌ಲೈನ್‌ ಪಾವತಿ ಸ್ಥಗಿತಗೊಂಡು ಪುಸ್ತಕ ಮಾರಾಟಗಾರರು ನಷ್ಟ ಅನುಭವಿಸುವಂತಾಗಿದೆ. 

ಕೋವಿಡ್‌ ಕಾರಣದಿಂದ 2021 ಮತ್ತು 2022ರಲ್ಲಿ ಎರಡು ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿ
ರಲಿಲ್ಲ. ಹಾವೇರಿಯ ಸಮ್ಮೇಳನಕ್ಕೆ ಪುಸ್ತಕ ಮಾರಾಟಗಾರರು ಅತ್ಯುತ್ಸಾಹದಿಂದ ಲಕ್ಷಾಂತರ ರೂಪಾಯಿ ಮೌಲ್ಯದ
ಪುಸ್ತಕಗಳನ್ನು ತೆಗೆದುಕೊಂಡು ಬಂದಿದ್ದಾರೆ. ಪುಸ್ತಕಪ್ರಿಯರು ಕೂಡ ಪುಸ್ತಕ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. 

ಪುಸ್ತಕ ಮಾರಾಟಗಾರರ ನಿರೀಕ್ಷೆ ಮತ್ತು ಸಾಹಿತ್ಯಪ್ರಿಯರ ಉತ್ಸಾಹಕ್ಕೆ ಇಂಟರ್‌ನೆಟ್‌ ಸಮಸ್ಯೆ ತಣ್ಣೀರು ಎರಚಿದೆ. ಹಾವೇರಿ ನಗರ
ದಿಂದ 5 ಕಿ.ಮೀ. ಹೊರವಲಯದಲ್ಲಿ ಸಮ್ಮೇಳನ
ಆಯೋಜಿಸಲಾಗಿದೆ. ಲಕ್ಷಾಂತರ ಜನರು ಒಂದೆಡೆ ಸೇರಿರುವ ಕಾರಣ ನೆಟ್‌ವರ್ಕ್‌ ಜಾಮ್‌ ಆಗಿ ಕರೆಗಳು ಬರುತ್ತಿಲ್ಲ, ಮೆಸೇಜ್‌
ಗಳು ಕೂಡ ಸಕಾಲದಲ್ಲಿ ತಲುಪುತ್ತಿಲ್ಲ. 

ಕ್ಯಾಶ್‌ ಇಲ್ಲ!: ‘ಸಮ್ಮೇಳನದ ಮೊದಲ ದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರಗೆ ನೆಟ್‌ವರ್ಕ್‌ ಕಣ್ಣಾಮುಚ್ಚಾಲೆ ಆಡಿದ ಪರಿಣಾಮ ಆನ್‌ಲೈನ್‌ ಪಾವತಿ ಸಾಧ್ಯವಾಗಲೇ ಇಲ್ಲ. ನೂರಾರು ಓದುಗರು ನೆಚ್ಚಿನ ಪುಸ್ತಕಗಳನ್ನು ಆಯ್ಕೆ ಮಾಡಿ, ಬಿಲ್‌ ಮಾಡುವ ಸಂದರ್ಭ ನಗದು ಹಣವಿಲ್ಲದೆ, ಇತ್ತ ಆನ್‌ಲೈನ್‌ ಪಾವತಿಯೂ ಸಾಧ್ಯವಾಗದೆ ವಾಪಸ್‌ ಹೋದರು’ ಎಂದು ನವಕರ್ನಾಟಕ ಪ್ರಕಾಶನದ ಸೇಲ್ಸ್‌ ಎಕ್ಸಿಕ್ಯೂಟಿವ್‌ ಅಶೋಕ್‌ ಅಳಲು ತೋಡಿಕೊಂಡರು. 

‘ಪುಸ್ತಕ ಖರೀದಿಸಲು ಬರುವ ಅನೇಕರು ಗೂಗಲ್‌ ಪೇ, ಫೋನ್‌ ಪೇ ಇದೆಯಾ ಅಂತ ಕೇಳುತ್ತಾರೆ. ಇಲ್ಲ ಅಂದರೆ ಪುಸ್ತಕಗಳನ್ನು ಬಿಟ್ಟು, ಹಿಂತಿರುಗುತ್ತಿದ್ದಾರೆ’ ಎಂದು ಪುಸ್ತಕ ಮಾರಾಟಗಾರರು ಬೇಸರ ವ್ಯಕ್ತಪಡಿಸಿದರು.

ಪುನೀತ್‌ ಪುಸ್ತಕಕ್ಕೆ ಭಾರಿ ಬೇಡಿಕೆ

ಹಾವೇರಿ ಸಮ್ಮೇಳನಕ್ಕೆ ₹9 ಲಕ್ಷ ಮೌಲ್ಯದ ಪುಸ್ತಕಗಳೊಂದಿಗೆ ಬಂದಿ
ದ್ದೇನೆ. ಮೊದಲ ದಿನವೇ ಪುಸ್ತಕಗಳು ಭರ್ಜರಿಯಾಗಿ ಮಾರಾಟವಾದವು. ನಾನು ಭಾಗವಹಿಸಿದ 13 ಸಮ್ಮೇಳನ
ಗಳಲ್ಲಿ ಮೊದಲ ದಿನವೇ ಇಂಥ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಮ್ಮ ಪ್ರಕಾಶನದ ಪುನೀತ್‌ ರಾಜಕುಮಾರ್‌ ಕುರಿತ ‘ನೀನೇ ರಾಜಕುಮಾರ’, ‘ಪ್ರೀತಿಯಿಂದ ರಮೇಶ್‌’ ಪುಸ್ತಕಗಳು 5ನೇ ಮುದ್ರಣ ಕಂಡಿದ್ದು, ಈ ಕೃತಿಗಳಿಗೆ ಭಾರಿ ಬೇಡಿಕೆಯಿದೆ’ ಎಂದು ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಸಂತಸ ಹಂಚಿಕೊಂಡರು.

 ಒಂದೇ ಸೂರಿನಡಿ ವೈವಿಧ್ಯಮಯ ಪುಸ್ತಕಗಳನ್ನು ನೋಡಿ ಖುಷಿಯಾಯಿತು. ಖರೀದಿಸೋಣ ಅಂದರೆ ಆನ್‌ಲೈನ್‌ ಪೇಮೆಂಟ್‌ಗೆ ಅವಕಾಶವೇ ಇಲ್ಲ.

–ಅರುಣ್‌ ಸವಣೂರು,ದಾವಣಗೆರೆ

 ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಯುಪಿಐ ಪಾವತಿ ವ್ಯವಸ್ಥೆ ಸರಾಗ ವಾಗಿ ನಡೆಯುತ್ತಿಲ್ಲ. ವೈಫೈ ಸೌಲಭ್ಯ ಕಲ್ಪಿಸಿ ನೆಟ್‌ವರ್ಕ್‌ ಸಮಸ್ಯೆ ನೀಗಿಸಬಹುದಿತ್ತು.

– ಚಿತ್ರಕಾಂತ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು