ಹಾವೇರಿ: ಜಿಲ್ಲೆಯ ಯುವತಿಯೊಬ್ಬರಿಗೆ ಉಡುಗೊರೆ ಆಮಿಷವೊಡ್ಡಿ ₹ 9 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಿಲ್ಲೆಯ ನಿವಾಸಿಯಾಗಿರುವ ಯುವತಿ, ವಂಚನೆ ಬಗ್ಗೆ ದೂರು ನೀಡಿದ್ದಾರೆ. ‘ಕನ್ನಡ ಮ್ಯಾಟ್ರಿಮೋನಿ’ ಆನ್ಲೈನ್ ವೇದಿಕೆ ಮೂಲಕ ಪರಿಚಯವಾಗಿದ್ದ ಆರೋಪಿ, ಕೃತ್ಯ ಎಸಗಿ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಯುವತಿ, ಅವಿವಾಹಿತೆ. ವರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕನ್ನಡ ಮ್ಯಾಟ್ರಿಮೋನಿಯಲ್ಲಿ ತಮ್ಮ ಖಾತೆ ತೆರೆದಿದ್ದರು. ಸ್ವಿಡ್ಜರ್ಲ್ಯಾಂಡ್ ಪ್ರಜೆಯೆಂದು ಹೇಳಿ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ, ತನಗೆ ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸವಿರುವುದಾಗಿ ತಿಳಿಸಿದ್ದ. ಮದುವೆಯಾಗುವುದಾಗಿಯೂ ಪ್ರಸ್ತಾಪ ಮುಂದಿಟ್ಟಿದ್ದ. ಆರೋಪಿ ಮಾತು ನಂಬಿದ್ದ ಯುವತಿ, ಚಾಟಿಂಗ್ ಮಾಡಲಾರಂಭಿಸಿದ್ದರು’ ಎಂದು ತಿಳಿಸಿದರು.

‘ಕೆಲ ದಿನಗಳ ನಂತರ ಯುವತಿಗೆ ಫೋಟೊ ಸಮೇತ ಸಂದೇಶ ಕಳುಹಿಸಿದ್ದ ಆರೋಪಿ, ‘ನಿನ್ನನ್ನು ನಾನು ತುಂಬಾ ಇಷ್ಟಪಡುತ್ತಿದ್ದೇನೆ. ನಿನಗೆ ಬೆಲೆಬಾಳುವ ಚಿನ್ನಾಭರಣ ಇರುವ ಉಡುಗೊರೆ ಕಳುಹಿಸುತ್ತಿದ್ದೇನೆ. ಅದನ್ನು ಸ್ವೀಕರಿಸು’ ಎಂದಿದ್ದ. ಇದಾದ ಕೆಲದಿನಗಳ ನಂತರ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದ ಆರೋಪಿಗಳು, ‘ಸ್ವಿಡ್ಜರ್ಲ್ಯಾಂಡ್ನಿಂದ ಕೋರಿಯರ್ ಬಂದಿದೆ. ಅದರಲ್ಲಿ ಬೆಲೆಬಾಳುವ ವಸ್ತುಗಳಿವೆ. ಶುಲ್ಕ ಪಾವತಿ ಮಾಡಿದರೆ, ನಿಮ್ಮ ವಿಳಾಸಕ್ಕೆ ಕಳುಹಿಸಲಾಗುವುದು’ ಎಂದಿದ್ದರು. ಅದನ್ನೂ ನಂಬಿದ್ದ ಯುವತಿ, ಹಂತ ಹಂತವಾಗಿ ₹ 9 ಲಕ್ಷ ಹಾಕಿದ್ದರು. ಇದಾದ ನಂತರ, ಯಾವುದೇ ಉಡುಗೊರೆ ಬಂದಿಲ್ಲ. ಆನ್ಲೈನ್ ವರ ಸಹ ನಾಪತ್ತೆಯಾಗಿದ್ದಾನೆ’ ಎಂದು ಹೇಳಿದರು.

‘ಯುವತಿ ದೂರು ನೀಡುತ್ತಿದ್ದಂತೆ, ಮಾಹಿತಿ ಕಲೆಹಾಕಲಾಯಿತು. ಆರೋಪಿ ನಕಲಿ ಖಾತೆ ತೆರೆದು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.