ಹಾವೇರಿ: ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಹಂತ– ಹಂತವಾಗಿ ಹಣ ಹಾಕಿಸಿಕೊಂಡು, ಬ್ಯಾಂಕ್ ಮ್ಯಾನೇಜರ್ವೊಬ್ಬರಿಗೆ ₹1.72 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಶಾಖೆಯ ವ್ಯವಸ್ಥಾಪಕ ಶ್ರೀಧರ ಎಚ್.ಟಿ. ಅವರು ವಂಚನೆಗೆ ಒಳಗಾದವರು.

ಸಂದೀಪ, ಕಪಿಲ್, ಅಕ್ಷರಾ ಮತ್ತು ಅನುಷಾ ಠಾಕೂರ್ ಎಂಬ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.

ಓಕೆಎಕ್ಸ್ ಆನ್ಲೈನ್ ಟ್ರೇಡಿಂಗ್ ನೌಕರರು ಎಂದು ಹೇಳಿಕೊಂಡು ಕರೆ ಮಾಡಿದ ನಾಲ್ವರು ಆರೋಪಿಗಳು ಟೆಲಿಗ್ರಾಂ ಆ್ಯಪ್ ನೆಫ್ಟ್ ಮತ್ತು ಯುಪಿಐ ಮೂಲಕ ನಾಲ್ಕೈದು ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾವೇರಿ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.