ಶುಕ್ರವಾರ, ಮೇ 27, 2022
29 °C
ನಿಜಗುಣಪ್ರಭು ತೋಂಟದಾರ್ಯ ಶ್ರೀಗಳ ‘ಅನುಭಾವ ದರ್ಶನ ಪ್ರವಚನ’ಕ್ಕೆ ಚಾಲನೆ

ನೆಲ–ಜಲ ರಕ್ಷಣೆಗಾಗಿ ಪಣತೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಾತಿ–ಮತ ಪಂಥಗಳ ಭೇದಭಾವ ಮರೆತು ಮಾನವೀಯತೆ ಮತ್ತು ಸೌಹಾರ್ದದಿಂದ ನಾವೆಲ್ಲರೂ ಬದುಕಬೇಕಿದೆ. ನೆಲ–ಜಲ ಮತ್ತು ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಪಣ ತೊಡಬೇಕಿದೆ’ ಎಂದು ಬೈಲೂರ ನಿಷ್ಕಲಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಪ್ರಕೃತಿ ಉಳಿವಿಗಾಗಿ ಮತ್ತು ವಿಶ್ವಶಾಂತಿಗಾಗಿ ಹಾವೇರಿ ತಾಲ್ಲೂಕಿನ ಅಗಡಿ ಅಕ್ಕಿಮಠದ ವತಿಯಿಂದ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ‘ಪರಿಸರ ಜಾತ್ರೆ–2022’ ಮತ್ತು ‘ಅನುಭಾವ ದರ್ಶನ ಪ್ರವಚನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನಿಗೆ ಬದುಕಲು ಅವಶ್ಯವಿರುವ ಪರಿಸರ ಉಳಿಸಲು ಆಯೋಜಿಸಿರುವ ಪರಿಸರ ಜಾತ್ರೆ ಇಂದಿನ ಅವಶ್ಯವಾಗಿದೆ. ಮನುಷ್ಯನಿಗೆ ಮುಖ್ಯವಾಗಿ ಶುದ್ಧವಾಗ ಗಾಳಿ ಬೇಕು. ಎಲ್ಲ ಜೀವರಾಶಿಗಳಿಗೆ ಪರಿಸರವೇ ಆಶ್ರಯವಾಗಿದೆ. ಹೀಗಾಗಿ ಅಕ್ಕಿಮಠದ ಶ್ರೀಗಳು ಆಯೋಜಿಸಿರುವ ಪರಿಸರ ಜಾತ್ರೆ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಪುರಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಮುನ್ಸಿಪಲ್ ಹೈಸ್ಕೂಲ್‌ ಮೈದಾನದವರೆಗೆ 5555 ಬಸವ ಜಲ ಕುಂಭಗಳ ಮೆರವಣಿಗೆ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆ ಗಾರುಡಿ ಗೊಂಬೆಗಳು ಮತ್ತು ವಾದ್ಯಗಳ ಹಿಮ್ಮೇಳದೊಂದಿಗೆ ಭವ್ಯವಾಗಿ ನೆರವೇರಿತು. ಪರಿಸರ ಜಾಗೃತಿ ಮೂಡಿಸುವ ಸ್ತಬ್ಧಚಿತ್ರವೂ ಗಮನಸೆಳೆಯಿತು. 

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಅಥಣಿಯ ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು