ರಾಣೆಬೆನ್ನೂರು: ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಮತ್ತು ಭೌತಿಕ ಸಾಮರ್ಥ್ಯ ಹೆಚ್ಚಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.
ತಾಲ್ಲೂಕಿನ ಮೇಡ್ಲೇರಿ ಬೀರೇಶ್ವರ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಯೋಜಿತ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಪಾರಿವಾಳಗಳನ್ನು ತೂರುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಎಲ್.ಎಲ್.ಹರಿಹರ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವಣ್ಣೆವ್ವ ಮಾಳಗಿ, ಉಪಾಧ್ಯಕ್ಷ ಲಮಾಣಿ ಅವರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು.
ಪ್ರಕಾಶ ಕೊಕ್ಕನವರ ಒಲಂಪಿಕ್ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಿ.ವಿ.ಕಡ್ಲಿಗೊಂದಿ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ಬಿಆರ್‌ಪಿ ನಾಗರಾಜ, ಸಿಆರ್‌ಪಿ ಗಿರೀಶ ರಾಠೋಡ, ಪ್ರಭಾರ ಮುಖ್ಯ ಶಿಕ್ಷಕಿ ಅನ್ನಪೂರ್ಣ ಚವ್ವಾಣ, ಆರ್.ಡಿ.ಹೊಂಬರಡಿ, ಲಕ್ಕಪ್ಪ ಕುದರಿಹಾಳ, ಹುಚ್ಚಪ್ಪ ಬಿಂಗೇರ, ಎಸ್.ಎಚ್. ಮೇಟಿ, ಸರಳಾ ಮೇಟಿ, ನಿರ್ಮಲಾ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಡಿ.ಎನ್.ಬೇವಿನಹಳ್ಳಿ, ಸಿ.ಎಲ್.ಶಿಡಗನಾಳ, ಎಂ.ಎಂ.ಕೂರಗುಂದ, ಎಂ.ಸಿ.ಬಲ್ಲೂರ, ಸುರೇಶ ಚಳಗೇರಿ, ವಿಮಲಾ ಶಿಡಗನಾಳ, ತಂಗೋಡ, ಶರೀಪ ಉದಗಟ್ಟಿ, ಅನ್ನಪೂರ್ಣ ಬಣಕಾರ ನಿರ್ಣಾಯಕರಾಗಿದ್ದರು.