ಅಕ್ಕಿಆಲೂರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹಾನಗಲ್ ತಾಲ್ಲೂಕಿನಲ್ಲಿ 5000 ಸಸಿ ನೆಡುವ ಅಭಿಯಾನಕ್ಕೆ ಉಪ್ಪುಣಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಚಾಲನೆ ನೀಡಲಾಯಿತು.
‘ಎಲ್ಲೆಡೆ ಆಮ್ಲಜನಕದ ಕೊರತೆಯಿಂದ ಜೀವಸಂಕುಲ ಸಂಕಷ್ಟದಲ್ಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭೀಕರ ದಿನಗಳನ್ನು ಕಾಣಬೇಕಾಗುತ್ತದೆ. ಕಾಲಕಾಲಕ್ಕೆ ಉತ್ತಮ ಮಳೆ ಸುರಿದು, ಒಳ್ಳೆಯ ಬೆಳೆ ಬಂದು ರೈತನ ಬದುಕು ಹಸನಾಗಬೇಕಾದರೆ ಸಸ್ಯ ಸಂಪತ್ತು ಸಮೃದ್ಧವಾಗಬೇಕಿದೆ. ಸಸ್ಯ ಸಂಪತ್ತು ವೃದ್ಧಿಸುವ ಇಚ್ಛೆಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನಲ್ಲಿ 55,000 ಸಸಿ ನೆಡಲು ಉದ್ದೇಶಿಸಲಾಗಿದೆ. ಸಂಘ–ಸಂಸ್ಥೆಗಳು, ಸಹೃದಯಿಗಳು ಈ ಅಭಿಯಾನದಲ್ಲಿ ಕೈ ಜೋಡಿಸುವಂತೆ ಅಭಿಯಾನಕ್ಕೆ ಚಾಲನೆ ನೀಡಿದ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ, ಮನವಿ ಮಾಡಿದರು.
ಯೋಜನಾಧಿಕಾರಿ ರಾಘವೇಂದ್ರ ಪಟಗಾರ, ಮುಖ್ಯೋಪಾಧ್ಯಾಯ ಪಿ.ಬಿ.ಚಿಕ್ಕೋಣತಿ, ಯೋಜನೆಯ ಕೃಷಿ ಮೇಲ್ವಿಚಾರಕ ಮಹಾಂತೇಶ, ಮಲ್ಲಯ್ಯ ಹಿರೇಮಠ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು, ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.