ಗುರುವಾರ , ಆಗಸ್ಟ್ 11, 2022
20 °C

ಕವನ ಸಂಕಲನ ಬಿಡುಗಡೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕವಯತ್ರಿ ದೀಪಾ ಗೋನಾಳ ಅವರ ‘ತಂತಿಗೆ ತಂತಿ ತಾಗಿ’ ಎಂಬ ಕವನ ಸಂಕಲನದ ಬಿಡುಗಡೆ ಡಿ.20ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಇಲ್ಲಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಬಿಡುಗಡೆಯಾಗಲಿದೆ.

ಲೇಖಕ ಜಿ.ಎನ್. ಮೋಹನ್‌ ಕೃತಿ ಬಿಡುಗಡೆಗೊಳಿಸುವರು. ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣ, ವಿದ್ಯಾದಾಯಿನಿ ಸಂಸ್ಥೆಯ ನಾಗೇಂದ್ರ ಕಟಕೋಳ, ಅಂಕಣಕಾರ್ತಿ ಹೇಮಾ ಡಿ. ಖುರ್ಸಾಪೂರ, ಯುವ ಕವಿ ರಾಜಕುಮಾರ ಮಡಿವಾಳರ, ಸಮಾಜ ಸೇವಕಿ ಶಾಲಿನಿ ಕಮ್ಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಆರ್.ಜೆ ಬ್ಯಾಟಪ್ಪನವರ ಹಾಗೂ ನಾಗರಾಜ ನಡುವಿನಮಠ ಪಾಲ್ಗೊಳ್ಳುವರು.

ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ದೀಪಾ ಗೋನಾಳ ಅವರ ಮೊದಲ ಕವನ ಸಂಕಲನ ಇದಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು