ಗುರುವಾರ , ಜುಲೈ 29, 2021
27 °C
ಹಾವೇರಿ ಬಸ್‌ ನಿಲ್ದಾಣದ ಮಳಿಗೆ ಮತ್ತು ಹೋಟೆಲ್‌ ಪರವಾನಗಿದಾರರ ಪ್ರತಿಭಟನೆ

ಹಾವೇರಿ: ಡಿಸೆಂಬರ್‌ವರೆಗೆ ಬಾಡಿಗೆ ಮನ್ನಾ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 3 ತಿಂಗಳಿಂದ ಮಳಿಗೆ ಬಂದ್‌ ಮಾಡಿದ ಪರಿಣಾಮ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹಾಗಾಗಿ ಡಿಸೆಂಬರ್‌ವರೆಗೂ ಬಾಡಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಹಾವೇರಿ ಬಸ್‌ ನಿಲ್ದಾಣದ ಮಳಿಗೆ ಮತ್ತು ಹೋಟೆಲ್‌ ಪರವಾನಗಿದಾರರು ಸೋಮವಾರ ಪ್ರತಿಭಟನೆ ನಡೆಸಿದರು. 

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್‌ 23ರಿಂದ ಮೇ 31ರವರೆಗೆ ಮಾಸಿಗೆ ಬಾಡಿಗೆಯನ್ನು ಮನ್ನಾ ಮಾಡಲಾಗಿತ್ತು. ಜೂನ್‌ 1ರಿಂದಲೇ ಬಾಡಿಗೆ ಕಟ್ಟುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಸರಿಯಾಗಿ ವ್ಯಾಪಾರವೇ ನಡೆಯುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟಲು ತೊಂದರೆಯಾಗಿದೆ. ಕೆಲಸಗಾರರಿಗೆ ಸಂಬಳ, ವಿದ್ಯುತ್‌ ಬಿಲ್‌ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ತೋಡಿಕೊಂಡರು. 

ಬಸ್‌ ನಿಲ್ದಾಣದಲ್ಲಿ ಎಲ್ಲ ಗೇಟುಗಳನ್ನು ಬಂದ್‌ ಮಾಡಿ, ಒಂದು ಗೇಟನ್ನು ಮಾತ್ರ ತೆರೆಯಲಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಹೊರಗಡೆ ಬರುತ್ತಿಲ್ಲ. ಇದರಿಂದ ವ್ಯಾಪಾರವೂ ಲಾಭದಾಯಕವಾಗಿಲ್ಲ. ಬಾಡಿಗೆ ಮನ್ನಾ ಮಾಡಲು ಹಲವಾರು ಬಾರಿ ಮನವಿ ಮಾಡಿದರೂ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಿಂದ ಮತ್ತು ವಿಭಾಗೀಯ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದರು. ಬಾಡಿಗೆ ಮನ್ನಾಕ್ಕೆ ಒಪ್ಪುವ ತನಕ ಜುಲೈ 13ರಿಂದ ಅನಿರ್ದಿಷ್ಟ ಅವಧಿಯ ತನಕ ಮಳಿಗೆ ಮತ್ತು ಹೋಟೆಲ್‌ಗಳನ್ನು ಬಂದ್‌ ಮಾಡುತ್ತಿದ್ದೇವೆ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು