ರಾಣೆಬೆನ್ನೂರಿನ ಈಶ್ವರನಗರದ ಎರಡನೇ ಹಂತದ 4 ನೇ ಕ್ರಾಸ್ ರಸ್ತೆಯಲ್ಲಿ ಗುಂಡಿ ಬಿದ್ದಿದೆ.
ರಾಣೆಬೆನ್ನೂರಿನ ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆ ಸಮೀಪದ ರಸ್ತೆ ಬದಿ ಗುಂಡಿಯಲ್ಲಿ ಕಸ ತುಂಬಿದೆ.
ರಾಣೆಬೆನ್ನೂರಿನ ಹಳೇ ಅಂತರವಳ್ಳಿ ರಸ್ತೆಯ ಮೇಲೆ ಚರಂಡಿ ನೀರು ದಿನಾಲು ಹರಿಯುತ್ತದೆ.
ರಾಣೆಬೆನ್ನೂರಿನ ಹಳೇ ಮಾಗೋಡ ಡಿವೈಡರ್ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ವರ್ಷ ಗತಿಸಿದೆ.
ರಾಣೆಬೆನ್ನೂರಿನ ಬಸ್ ನಿಲ್ದಾಣದ ಎದುರಿನ ರೇಣುಕಾ ಹೊಟೇಲ್ ಮತ್ತು ಕೋರ್ಟ್ ಮಧ್ಯೆ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯಿಂದ ಮೌಂಟ್ ವಿವ್ ಸ್ಕೂಲ್ ರಸ್ತೆ ಯುಜಿಡಿ ತೆಗ್ಗುಗಳಿಂದ ಕೂಡಿದ್ದು ಚರಂಡಿ ನೀರು ಹರಿಯದೇ ಸೊಳ್ಳೆಗಳು ಉತ್ಪತ್ತಿಯಾಗುವ ತಾಣವಾಗಿದೆ.
ರಾಣೆಬೆನ್ನೂರಿನ ನೆಹರು ಮಾರುಕಟ್ಟೆಯ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಮಳೆಗಾಲದಲ್ಲಿ ವಾಣಿಜ್ಯ ಮಳಿಗೆ ಮುಂದೆ ನೀರು ನಿಲ್ಲುತ್ತಿದೆ.