ಶನಿವಾರ, ಸೆಪ್ಟೆಂಬರ್ 18, 2021
28 °C

ಸವಣೂರಿನಲ್ಲಿ ರೌಡಿಶೀಟರ್ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವಣೂರು: ಮಾರಕಾಸ್ತ್ರಗಳಿಂದ ರೌಡಿಶೀಟರ್‌ ಅನ್ವರ ಶೇಖ ಅಲಿಯಾಸ್ ಟೈಗರ್ ಅನ್ವರ (40)ನನ್ನು ಬರ್ಬರ ಹತ್ಯೆ ಮಾಡಿರುವ ಪ್ರಕರಣ ಭಾನುವಾರ ಸವಣೂರ ಪಟ್ಟಣದ ಕಾರಡಗಿ ರಸ್ತೆಯಲ್ಲಿ ನಡೆದಿದೆ.

ಅನ್ವರ ಶೇಖ ಮೂಲತಃ ಸವಣೂರ ತಾಲ್ಲೂಕಿನ ಕಾರಡಗಿ ಗ್ರಾಮದ ನಿವಾಸಿಯಾಗಿದ್ದು, ಗೋವಾದಲ್ಲಿ ವಾಸವಾಗಿದ್ದ. ಗೋವಾದಲ್ಲಿ ಅವನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿಯೇ ರೌಡಿ ಪಟ್ಟಿಯಲ್ಲಿ ಅವನ ಹೆಸರು ಸೇರ್ಪಡೆಯಾಗಿತ್ತು. ಆಗಾಗ ಸ್ವ ಗ್ರಾಮಕ್ಕೆ ಬಂದು ಹಪ್ತಾ ವಸೂಲಿ ಮಾಡುತ್ತಿದ್ದ. ಸವಣೂರ ಪಟ್ಟಣದ ವಿ.ಕೃ. ಗೋಕಾಕ ವೃತ್ತದಲ್ಲಿರುವ ಇಮ್ರಾನ್ ಚೌಧರಿ ಗ್ಯಾರೇಜ್ ನುಗ್ಗಿ ಹಣ ಕಳವು ಮಾಡಿದ್ದ. ಗ್ಯಾರೇಜ್‌ ಮಾಲೀಕ ಇಮ್ರಾನ್ ಚೌಧರಿ ಅವನಿಗೆ ಕಾಯುತ್ತಿದ್ದ.

ರೌಡಿ ಅನ್ವರ ಶೇಖ್ ಭಾನುವಾರ ಸಂಜೆ 6 ಸುಮಾರಿಗೆ ಸ್ವಗ್ರಾಮಕ್ಕೆ ಹೋಗುವ ವೇಳೆ ಚೌಧರಿ ಕಾರಡಗಿ ರಸ್ತೆಯಲ್ಲಿ ವಾಹನ ತಡೆದು ಹಣ ಕೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ರೌಡಿ ಅನ್ವರ ವಾಹನದಲ್ಲಿದ್ದ ಮಾರಕಾಸ್ತ್ರ ತೆಗೆದುಕೊಂಡು ಬಂದಾಗ, ಚೌಧರಿ ಅದೇ ಮಾರಕಾಸ್ತ್ರದಿಂದ ಅನ್ವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಆರೋಪಿ ಇಮ್ರಾನ್ ಚೌಧರಿ ಸವಣೂರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು