ಹಾವೇರಿ: ‘ಬ್ಯಾಡಗಿ ಪುರಸಭೆಯಲ್ಲಿ ಕಾಯಂ ಪೌರ ಕಾರ್ಮಿಕರಾಗಿದ್ದ ನನ್ನ ಅಳಿಯ ರಮೇಶನನ್ನು ಇತ್ತೀಚೆಗೆ ದೊಡ್ಡ ಆಸ್ಪತ್ರೆಗೆ ಸೇರಿಸಲಾಗಿತ್ತು. ಲೀವರ್ ಸಮಸ್ಯೆ ಇರುವುದಾಗಿ ಹೇಳಿದ್ದ ವೈದ್ಯರು, ಚಿಕಿತ್ಸೆಗೆ ₹ 30 ಲಕ್ಷ ಖರ್ಚಾಗುವುದಾಗಿ ತಿಳಿಸಿದ್ದರು. ಅಷ್ಟು ಹಣ ಹೊಂದಿಸಲು ಆಗಲಿಲ್ಲ. ಕೊನೆಗೂ ರಮೇಶ ಆಸ್ಪತ್ರೆಯಲ್ಲೇ ಪ್ರಾಣಬಿಟ್ಟ. ಊರನ್ನು ಸ್ವಚ್ಛಗೊಳಿಸುವ ನಮ್ಮಂಥವರಿಗೆ ಎಲ್ಲ ಆಸ್ಪತ್ರೆಯಲ್ಲಿ ಯಾವುದೇ ಕಾಯಿಲೆಯಿದ್ದರೂ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ರಮೇಶಗೆ ಬಂದ ಸ್ಥಿತಿ ಯಾರಿಗೂ ಬರಬಾರದು’ ಎಂದು ಸಂಬಂಧಿ ಮಹಿಳೆ ಅಳಲು ತೋಡಿಕೊಂಡರು.

ನಗರದ ಗುರುಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಜೊತೆಗಿನ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಮಹಿಳೆ, ‘ಪೌರ ಕಾರ್ಮಿಕರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇಂದು ಸಹ ಪೌರ ಕಾರ್ಮಿಕರೊಬ್ಬರು ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ಏನು ಹೇಳುತ್ತಾರೆಯೋ? ಲಕ್ಷಾಂತರ ರೂಪಾಯಿ ಕೇಳಿದರೆ ಎಲ್ಲಿಂದ ತರುವುದು? ಎಂಬ ಭಯ ಕಾಡುತ್ತಿದೆ’ ಎಂದು ಭಾವುಕರಾದರು.

ಅದಕ್ಕೆ ಪ್ರತಿಕ್ರಿಯಿಸಿದ ಪಿ.ರಘು, ‘ರಾಜ್ಯ ಸರ್ಕಾರಿ ನೌಕರರ ರೀತಿಯಲ್ಲಿಯೇ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸ ಸಿಬ್ಬಂದಿಗೆ ‘ಉಚಿತ ಆರೋಗ್ಯ ಸೇವೆ’ ನೀಡುವ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಸೌಲಭ್ಯ ಸಿಗುವ ವಿಶ್ವಾಸವಿದೆ. ಎಲ್ಲ ಪೌರಕಾರ್ಮಿಕರು, //ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಸಾಮಾನ್ಯ ಉಚಿತ ತಪಾಸಣೆ ಮಾಡಿಸಿಕೊಳ್ಳಬೇಕು.// ವರ್ಷಕ್ಕೊಮ್ಮೆ ಮಾಸ್ಟರ್ ತಪಾಸಣೆ ಆಗಬೇಕು. ಎಲ್ಲ ವರದಿಗಳನ್ನು ಸಂಗ್ರಹಿಸಿಟ್ಟುಕೊಂಡು, ಸಮಸ್ಯೆಯಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಬೇಕು. ಊರಿನ ಆರೋಗ್ಯ ಕಾಪಾಡುವ ನೀವು, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ: ‘ನಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿಸಬೇಕೆಂಬ ಆಸೆಯಿದೆ. ಆದರೆ, ಶುಲ್ಕ ತುಂಬಲು ಆಗುತ್ತಿಲ್ಲ. ಸರ್ಕಾರವೇ ನಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಎಲ್ಕೆಜಿಯಿಂದ 5ನೇ ತರಗತಿಯವರೆಗೆ ಉಚಿತ ಶಿಕ್ಷಣ ಕೊಡಿಸಬೇಕು’ ಎಂದು ಪೌರ ಕಾರ್ಮಿಕರು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪಿ. ರಘು, ‘ಇದೊಂದು ಒಳ್ಳೆಯ ಸಲಹೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ಸರ್ಕಾರದ ವಸತಿ ಶಾಲೆಗಳಿಗೆ ನೇರವಾಗಿ ಸೇರಿಸಲು ಅವಕಾಶವಿದೆ. ಇದರ ಲಾಭ ಪಡೆಯಬೇಕು. ನಿಮ್ಮ ಮಕ್ಕಳು ಶಿಕ್ಷಣವಂತರಾಗಿ ಒಳ್ಳೆಯ ಅಧಿಕಾರಿಗಳಾಗಲಿ’ ಎಂದರು.

ಅರ್ಹರಿಗೆ ಕಾಯಂ ನೇಮಕಾತಿ; ‘ಗುತ್ತಿಗೆ, ನೇರ ಪಾವತಿ, ನೇರ ನೇಮಕಾತಿ ಹಾಗೂ ಕಾಯಂ ನೇಮಕಾತಿ ವಿಚಾರವಾಗಿ ಜಿಲ್ಲೆಯಲ್ಲಿ ಗೊಂದಲಗಳಿವೆ. ಅರ್ಹರಾದ ಎಲ್ಲರನ್ನೂ ಕಾಯಂ ನೇಮಕಾತಿ ಮಾಡಿಕೊಂಡು, ವೇತನ ನೀಡಬೇಕು. ಎಲ್ಲರಿಗೂ ಪಿ.ಎಫ್., ಇಎಸ್ಐ ಸೌಲಭ್ಯ ಒದಗಿಸಬೇಕು’ ಎಂದು ಪಿ.ರಘು ಹೇಳಿದರು.

500 ಜನರಿಗೊಬ್ಬ ಪೌರ ಕಾರ್ಮಿಕರನ್ನು ನೇಮಿಸಿ: ‘ಸದ್ಯ ನಿಯಮಗಳ ಪ್ರಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಒತ್ತಡ ಹೆಚ್ಚಾಗುತ್ತಿದೆ. 500 ಜನರಿಗೊಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ’ ಎಂದು ಮುಖಂಡ ಸುಭಾಷ್ ಬೆಂಗಳೂರು ಕೋರಿದರು.

ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಸವಣೂರು, ರಟ್ಟೀಹಳ್ಳಿ, ಗುತ್ತಲ, ಬಂಕಾಪುರ, ಶಿಗ್ಗಾವಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸದ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.

ಆಯೋಗದ ಸಂಶೋಧನಾಧಿಕಾರಿ ಮಹದೇವಸ್ವಾಮಿ, ಸದಸ್ಯ ಭೀಮಣ್ಣ ಯಲ್ಲಪ್ಪನವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಇದ್ದರು.

ವೇತನ ವಿಚಾರ: ನೋಟಿಸ್ ಜಾರಿ

‘ರಾಣೆಬೆನ್ನೂರು ಗುತ್ತಲ ಕುರುಬರಮಲ್ಲೂರು ಸೇರಿ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ವೇತನ ಪಾವತಿ ತಡವಾಗುತ್ತಿದೆ’ ಎಂದು ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಅಳಲು ತೋಡಿಕೊಂಡರು. ಅದನ್ನು ಆಲಿಸಿದ ಪಿ.ರಘು ‘ಸರ್ಕಾರವೇ ಪ್ರತಿ ತಿಂಗಳು 5ರೊಳಗಾಗಿ ವೇತನ ನೀಡುವಂತೆ ಹೇಳಿದೆ. ಆದರೆ ಕೆಲ ಸ್ಥಳೀಯ ಸಂಸ್ಥೆಯವರು ಸಂಬಳ ನೀಡದಿರುವುದು ಸರಿಯಲ್ಲ. ಬೇರೆ ಕೆಲಸಕ್ಕೆ ಹಣ ನೀಡುತ್ತೀರಾ. ಸ್ವಚ್ಛತೆ ಮಾಡುವವರಿಗೆ ಏಕೆ ಕೊಡುವುದಿಲ್ಲ. ಪೌರ ಕಾರ್ಮಿಕರ ವೇತನ ಪಾವತಿಗೆ ಮೊದಲ ಆದ್ಯತೆ ನೀಡಿ. ಎಲ್ಲರಿಗೂ 5ನೇ ತಾರೀಖಿನೊಳಗೆ ಸಂಬಳ ನೀಡಬೇಕು’ ಎಂದು ತಾಕೀತು ಮಾಡಿದರು. ‘ಸಂಬಳ ನೀಡಲು ಅನುದಾನ ಕೊರತೆ ಇದೆ’ ಸೇರಿದಂತೆ ಹಲವು ನೆಪ ಹೇಳಿದ ರಾಣೆಬೆನ್ನೂರು ನಗರಸಭೆಯ ಪೌರಾಯುಕ್ತ ಸೇರಿ ಹಲವರಿಗೆ ನೋಟಿಸ್ ನೀಡುವಂತೆ ಪಿ.ರಘು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಗೃಹಭಾಗ್ಯ ಯೋಜನೆಗೆ ಬಾರದ ಹಣ’

‘ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹ 7.50 ಲಕ್ಷ ನೀಡುತ್ತಿದ್ದು ಅದರಲ್ಲಿ ಕೇವಲ ₹6 ಲಕ್ಷ ಬಂದಿದೆ. ಬಾಕಿ ₹1.50 ಲಕ್ಷ ಬಂದಿಲ್ಲ’ ಎಂದು ಪೌರ ಕಾರ್ಮಿಕರು ದೂರಿದರು. ಪಿ.ರಘು ‘ಜಿಲ್ಲೆಯಲ್ಲಿ ಗೃಹಭಾಗ್ಯ ಯೋಜನೆಯಲ್ಲಿ ಎಷ್ಟು ಜನಕ್ಕೆ ಹಣ ಬಂದಿದೆ? ಯಾರಿಗೆ ಬಂದಿಲ್ಲ? ಎಂಬುದನ್ನು ಪಟ್ಟಿ ಮಾಡಿ ತಿಳಿಸಿ. ಸಂಬಂಧಪಟ್ಟ ಅಧಿಕಾರಿಗಳ ಚರ್ಚಿಸುವೆ’ ಎಂದು ಅಧಿಕಾರಿಗಳಿಗೆ ತಿಳಿಸಿದರು. ಕೆಲ ಪೌರಕಾರ್ಮಿಕರು ನಿವೇಶನಕ್ಕಾಗಿ ಬೇಡಿಕೆ ಇರಿಸಿದರು. ‘ನಿಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರ ಜಾಗವನ್ನು ನಿವೇಶನಕ್ಕಾಗಿ ಮಂಜೂರು ಮಾಡುವಂತೆ ಸ್ಥಳೀಯ ಸಂಸ್ಥೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿ. ಶಾಸಕರನ್ನೂ ಭೇಟಿಯಾಗಿ. ಲಭ್ಯವಿರುವ ಜಾಗವನ್ನು ಮಂಜೂರು ಮಾಡಿಸಿಕೊಂಡು ನಿವೇಶನ ಪಡೆಯಿರಿ’ ಎಂದು ರಘು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.