ಸವಣೂರು: ಜೆಸಿಐ ನಮ್ಮ ಸವಣೂರು ಘಟಕದ ಸಾಮಾಜಿಕ ಕಾರ್ಯಕ್ಕೆ ಜೆಸಿಐ ಭಾರತದ ವಲಯ-24ರ ಪರವಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 18ಕ್ಕೂ ಹೆಚ್ಚು ಪ್ರಶಸ್ತಿ, ಬಹುಮಾನ ಲಭಿಸಿವೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ಶ್ರೀಮತಿ ರುದ್ರಾಂಬಾ ಎಂ.ಪಿ.ಪ್ರಕಾಶ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜೆಸಿಐ ಹೂವಿನಹಡಗಲಿ ರಾಯಲ್ ಏರ್ಪಡಿಸಿದ್ದ ಜೆಸಿಐ ಮಧ್ಯವಾರ್ಷಿಕ ವಲಯ ಸಮ್ಮೇಳನ-2025 ಪಾಂಚಜನ್ಯದಲ್ಲಿ ಕಾರ್ಯಕ್ರಮದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರಶಸ್ತಿ ಹಾಗೂ ಬಹುಮಾನಗಳನ್ನು ಸ್ವೀಕರಿಸಿದರು.

ರಾಷ್ಟ್ರ ಪ್ರಶಸ್ತಿ: ಜೆಸಿಐ ಭಾರತ ವತಿಯಿಂದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ನಿರ್ವಹಿಸಿರುವ ಕಾರ್ಯ ಕ್ಷಮತೆಯೊಂದಿಗೆ ಗಣ್ಯ ಅಧ್ಯಕ್ಷೆಯಾಗಿ ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಆಯ್ಕೆಗೊಂಡ ಹಿನ್ನಲೆಯಲ್ಲಿ 2 ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಬಹುಮಾನ, ವಿಶೇಷ ರಕ್ತದಾನ ಶಿಬಿರ ಏರ್ಪಡಿಸಿರುವ ಹಿನ್ನಲೆಯಲ್ಲಿ 2 ರಾಷ್ಟ್ರೀಯ ಅಭಿನಂದನಾ ಪ್ರಮಾಣ ಪತ್ರ ನೀಡಲಾಗಿದೆ.

ವಲಯ ಮಟ್ಟದ ಪ್ರಶಸ್ತಿ ಹಾಗೂ ಬಹುಮಾನ: ತರಬೇತಿ ವಿಭಾಗದಲ್ಲಿ ಮಹೋನ್ನತ ಘಟಕ, ಆಡಳಿತ ವಿಭಾಗದಲ್ಲಿ ಜೆಸಿಐ ಕೊಡಗೆ, ಅತ್ಯುತ್ತಮ ಘಟಕಾಧ್ಯಕ್ಷರು, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಿಶೇಷ ಮನ್ನಣೆ, ಸಮುದಾಯ ಅಭಿವೃದ್ಧಿ, ಲೇಡಿ ಜೆಸಿ, ಮೀಷನ್ ಒನ್ ಲ್ಯಾಕ್, ರಾಷ್ಟ್ರೀಯ ತರಬೇತಿ ದಿನ, ಮಹಿಳಾ ದಿನಾಚರಣೆ, ಸ್ಟಾರ್ ಕಾರ್ಯದರ್ಶಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 18ಕ್ಕೂ ಹೆಚ್ಚು ಪ್ರಶಸ್ತಿಯೊಂದಿಗೆ ಬಹುಮಾನ ಸ್ವೀಕರಿಸಿದರು.

ಜೆಸಿಐ ಭಾರತ ವಲಯ-24ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ ಗೌರೀಶ ಭಾರ್ಗವ ಕೆ.ವಿ., ಮಧುಸೂದನ್, ವಿದ್ಯಾಧರ ಕುತನಿ, ರಾಜೇಶ್ವರಿ ಹರಿಹರ, ವಿನಾಯಕ ಕೋಡಿಹಳ್ಳಿ, ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಪದಾಧಿಕಾರಿಗಳಾದ ಹರೀಶ ಹಿರಳ್ಳಿ, ಪ್ರಕಾಶ ಜಮಾದಾರ, ಡಾ.ಪರಶುರಾಮ ಹೊಳಲ, ಬಾಪುಗೌಡ ಕೊಪ್ಪದ, ಎಸ್.ಬಿ.ಪಾಟೀಲ, ಬಸನಗೌಡ ಪಾಟೀಲ, ಮಧುಕರ ಜಾಲಿಹಾಳ, ಮಲ್ಲಿಕಾರ್ಜುನ ಬಾಣದ, ಶಂಕ್ರಯ್ಯ ಹಿರೇಮಠ, ಜೆಸಿಐ ಲಕ್ಷ್ಮೇಶ್ವರ ಪುಲಿಗೇರೆ ಪ್ರಭೆ ಅಧ್ಯಕ್ಷೆ ಲಕ್ಷ್ಮೀ ಹಂಗನಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.