ಗುರುವಾರ , ಜೂನ್ 30, 2022
25 °C

ಆರೋಗ್ಯವಂತ ನಾಡು ನಿರ್ಮಾಣವಾಗಲಿ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿಸರ ನಾಶವಾಗದಂತೆ ನೋಡಿಕೊಳ್ಳುವ ಜತೆಗೆ ಆರೋಗ್ಯವಂತ ನಾಡು ನಿರ್ಮಾಣಕ್ಕೆ ಎಲ್ಲರು ಕೈಜೋಡಿಸಬೇಕಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ಸಂಪತ್ತು ನಾಶವಾದಂತೆ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ. ಗಿಡಮರಗಳು ಮನುಷ್ಯನಿಗೆ ನೀಡುವ ಆಮ್ಲಜನಕ ಕಡಿಮೆಯಾಗಿ ಇಲ್ಲದ ರೋಗರುಜಿನಗಳು ಆರಂಭವಾಗಿವೆ ಎಂದರು.

ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ರಾಜ್ಯ ಯುವ ಮೋರ್ಚಾ ಘಟಕದ ಸದಸ್ಯ ನರಹರಿ ಕಟ್ಟಿ ಮಾತನಾಡಿದರು. ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ರಾಯಣ್ಣವರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ರಾಜೇಶ ದೊಡ್ಡಮನಿ, ಪ್ರತೀಕ್ ಕೋಳೆಕರ, ಚೇತನ್ ಕಲಾಲ್, ಮಂಜುನಾಥ ಮಿರ್ಜಿ, ಸಚಿನ್ ಮಡಿವಾಳರ, ರಾಘವೇಂದ್ರ ಆಟದಕರ ಸೇರಿದಂತೆ ಯುವ ಮೋರ್ಚಾ ಘಟಕದ ಎಲ್ಲ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು