ಶಿಗ್ಗಾವಿ: ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಬಿಜೆಪಿಯಿಂದ ಸುಮಾರು 57 ಜನ ಆಂಕಾಂಕ್ಷಿಗಳಿದ್ದು, ಪ್ರತಿಯೊಬ್ಬರು ವರಿಷ್ಠರ ಎದುರು ಬಲಾಬಲ ಪ್ರದರ್ಶನಕ್ಕೆ ಶುಕ್ರವಾರ ವೇದಿಕೆಯಾಯಿತು.

ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ನಡೆದ ಶಿಗ್ಗಾವಿ-ಸವಣೂತ ವಿಧಾನಸಭಾ ಕ್ಷೇತ್ರದ ಸಂಘಟನಾ ಸಭೆಗೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ರಾಧಾ ಮೋಹನದಾಸ್ ಅಗರವಾಲ್ ಎದುರು ಈ ಘಟನೆ ನಡೆಯಿತು.

ಪ್ರಮುಖ ಆಕಾಂಕ್ಷಿಗಳ ಪಟ್ಟಿರುವ ಬಿಜೆಪಿ ಮುಖಂಡ ಶ್ರೀಕಾಂತ ದುಂಡಿಗೌಡ್ರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅಲ್ಲದೆ ಪಕ್ಷದ ವರಿಷ್ಠರಾದ ಮಹೇಶ ತೆಂಗಿನಕಾಯಿ ಸೇರಿದಂತೆ ಹಲವು ಮುಖಂಡರೊಂದಿಗೆ ಪುರಸಭೆ ಮುಂದಿನ ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿಗೆ ಹೂಹಾರ ಹಾಕಿದರು. ನಂತರ ತಮ್ಮ ಅಭಿಮಾನಿಗಳ ಮೂಲಕ ಚನ್ನಮ್ಮ ವೃತ್ತದಿಂದ ಸವಣೂರ ರಸ್ತೆಯಲ್ಲಿನ ಬೊಮ್ಮಾಯಿ ಸಭಾ ಭವನದ ವರೆಗೆ ಮೆರವಣಿಗೆ ನಡೆಸಿದರು.

ನಂತರ ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸೀಮಗೌಡ್ರ, ಗಂಗೆಬಾವಿ ರೇಸಾರ್ಟ್ ಮಾಲೀಕ ಶಶಿಧರ ಯಲಿಗಾರ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಸೇರಿದಂತೆ ಸುಮಾರು 57 ಜನರು ಹಾಜರಿದ್ದು, ವರಿಷ್ಠರಿಗೆ ಮನವಿ ಸಲ್ಲಿಸುವುದು ಸೇರಿದಂತೆ ಪಕ್ಷಕ್ಕೆ ತಾವು ಮಾಡಿದ ಕಾರ್ಯಗಳನ್ನು ವಿವರಿಸುತ್ತಿದ್ದರು.

ನಂತರ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲಾಯಿತು. ನಂತರ ಡಾ.ಅಗರವಾಲ್ ಮಾತನಾಡಿ, ಎಲ್ಲರ ಅರ್ಜಿ ಸ್ವೀಕರಿಸಿದ್ದೇವೆ. ಈ ಕುರಿತು ಸಭೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಎಲ್ಲರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಾಕೀತು ಮಾಡಿದರು.

ಸದಸ್ಯತ್ವ ಹೆಚ್ಚಿಸುವ ಮೂಲಕ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಉಪಚುನಾವಣೆಗೆ ಆಕಾಂಕ್ಷಿಗಳ ಕುರಿತು ಸಾಮೂಹಿಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಪಕ್ಷದ ಸಾಧನೆಗಳನ್ನು ಜನಮನಕ್ಕೆ ತಲುಪಿಸುವ ಮೂಲಕ ಒಂದು ಮನೆಯಲ್ಲಿ ಒಬ್ಬರದಾದರೂ ಸದಸ್ಯತ್ವ ಪಡೆಯಬೇಕು. ಯಾರು ಹೆಚ್ಚು ಸದಸ್ಯತ್ವ ಪಡೆಯುತ್ತಾರೆ. ಅಂತಹ ವ್ಯಕ್ತಿಗಳಲ್ಲಿ 3 ಜನರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗುವುದು ಎಂದರು.

ಪಕ್ಷದ ಗೆಲುವಿಗೆ ಶಕ್ತಿಕೇಂದ್ರಗಳ ಪಾತ್ರ ಮುಖ್ಯವಾಗಿದ್ದು, ಹೀಗಾಗಿ ಕುಂದೂರ, ತಡಸ, ದುಂಢಸಿ, ಹುಲಗೂರ, ಬಂಕಾಪುರ, ಶಿಗ್ಗಾವಿ, ಸವಣೂರ, ಹುರಳಿಕೊಪ್ಪಿ, ಕಾರಡಗಿ ಸೇರಿದಂತೆ ಹಲವು ಶಕ್ತಿಕೇಂದ್ರಗಳಿಗೆ ಮುಖ್ಯಸ್ಥರನ್ನು ನೇಮಿಸಲಾಯಿತು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ಗುಂಪುಗಾರಿಕೆ ಬಿಟ್ಟು ಪಕ್ಷದ ಏಳ್ಗೆಗಾಗಿ ಶ್ರಮಿಸಬೇಕು. ಮನದ ಮಾತು, ಸೇವಾ ಪಾತ್ಯಕ್ಷಿಕೆ, ಸರ್ಕಾರಿ ಶಾಲೆಗಳ ಸ್ವಚ್ಚತೆ, ಆಸ್ಪತ್ರೆಗಳ ಮತ್ತು ಮಹಾತ್ಮರ ಮೂರ್ತಿಗಳ ಸ್ವಚ್ಚತೆ, ರಕ್ತದಾನ ಶಿಬಿರ, ಆಯುಷ್ಮಾನ್ ಭಾರತ ಕಾರ್ಡ್‌ಗಳ ಹಂಚಿಕೆ ಮಾಡುವ ಮೂಲಕ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಪಡಿಸುವ ಕೆಲಸ ಮಾಡಬೇಕು. ಎಂದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ನೀರಲಗಿ, ವಿರೋಧ ಶಂಕರ ಪಾಟೀಲ ಮುನೇನಕೊಪ್ಪ, ಶಿವರಾಜ ಸಜ್ಜನ, ಎಂ.ಆರ್.ಪಾಟೀಲ, ಬಸವರಾಜ ಕೆಲಗಾರ, ಅಮೃತ ದೇಸಾಯಿ, ಸೃಷ್ಟಿ ಪಾಟೀಲ, ಸುಭಾಸ ಚವ್ಹಾಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ, ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಹರವಿ ಮುಂತಾದವರು ಇದ್ದರು.

ಪಕ್ಷದ ಬೆಳವಣಿಗೆಯಲ್ಲಿ ಸದಸ್ಯತ್ವ ಅಭಿಯಾನ ಪ್ರಮುಖ. ಗೆಲ್ಲುವ ಅಭ್ಯರ್ಥಿ ಗುರುತಿಸಿ ಟಿಕೆಟ್ ನೀಡಲಾಗುವುದು. ಪ್ರತಿ ಬೂತ್‌ನಲ್ಲಿ 400 ಜನ ಸದಸ್ಯರನ್ನಾಗಿ ಮಾಡಬೇಕು
ಡಾ.ರಾಧಾ ಮೋಹನದಾಸ್ ಅಗರವಾಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.