ಹಾವೇರಿ: ‘ಮಾನವ ಕುಲಕ್ಕೆ ಒಳ್ಳೆಯದು ಮಾಡುವುದೇ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮುಖ್ಯ ಉದ್ದೇಶವಾಗಿದೆ. ಆದರೆ, ಇಂದಿನ ಬಹುತೇಕರು ಧರ್ಮ– ಜಾತಿ ಹೆಸರಿನಲ್ಲಿ ಕಚ್ಚಾಡುತ್ತಿದ್ದಾರೆ. ಇನ್ನಾದರೂ ಸರ್ವಧರ್ಮಗಳ ಮಹಾನ್ ಪುರುಷರು ಹಾಕಿಕೊಟ್ಟಿರುವ ತತ್ವದಡಿ ಬದುಕು ಕಟ್ಟಿಕೊಂಡರೆ, ವಿಶ್ವಗುರು ಬಸವಣ್ಣನವರ ಕನಸು ನನಸಾಗುತ್ತದೆ’ ಎಂದು ರಾಮದುರ್ಗದ ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ನಗರದ ಸಿಂದಗಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಸವ ಬಳಗದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ’ದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ‘ಸರ್ವಧರ್ಮದ ಮೂಲ ಪುರುಷರು, ಮನುಷ್ಯರಲ್ಲಿ ಯಾವುದೇ ಭೇದವನ್ನು ಹುಟ್ಟಿಸಿಲ್ಲ. ಮಾನವ ಕುಲ ಒಂದಾಗಿ ಬಾಳಬೇಕೆಂಬ ದೈವ ಚಿಂತನೆ ಮಾಡಿದ್ದಾರೆ’ ಎಂದರು.

‘ಬಸವಣ್ಣನವರು ಸತ್ಯ ಶುದ್ಧ ಕಾಯಕದ ಭಕ್ತಿ ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಬಸವಾದಿ ಶರಣರು ಅದೇ ಮಾರ್ಗದಲ್ಲಿ ನಡೆದು ತೋರಿಸಿದ್ದಾರೆ. ಇಂದಿನ ರಾಜಕಾರಣಿಗಳು ಸಹ ಮಠದ ಮಹಾದ್ವಾರದೊಳಗೆ ಹೆಜ್ಜೆ ಇಟ್ಟಾಗ, ತಮ್ಮ ಪಕ್ಷವನ್ನು ಮರೆಯಬೇಕು. ಭಕ್ತಿ ಪಕ್ಷವಾಗಿ ಮಠ ಪ್ರವೇಶಿಸಬೇಕು. ಮಠದ ಒಳಗೆ ತಮ್ಮ ಪಕ್ಷವನ್ನು ತರಬಾರದು’ ಎಂದು ವಾಸ್ತವ ಸ್ಥಿತಿ ತೆರೆದಿಟ್ಟು ಚಾಟಿ ಬೀಸಿದರು.

‘ಸ್ವಾಮೀಜಿಗಳು ಸಹ ರಾಜಕೀಯದೊಳಗೆ ಹೋಗಬಾರದು. ತಮ್ಮ ಬಳಿ ಯಾವುದೇ ದೊಡ್ಡ ಪಕ್ಷದ ಮುಖಂಡರು ಬಂದರೂ ಜನಸಾಮಾನ್ಯರಿಗೆ ಒಳ್ಳೆಯ ಮಾಡುವಂತೆ ಹೇಳಬೇಕು. ಅದನ್ನು ಬಿಟ್ಟು ತಾವೇ ರಾಜಕೀಯ ಮಾಡಲು ಹೋಗಬಾರದು. ಪ್ರತಿಯೊಬ್ಬರು ತಾವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ತತ್ವನಿಷ್ಠೆಯಿಂದ ಮಾಡಬೇಕು. ಇದು ಸ್ವಾಮೀಜಿಗಳಿಗೂ ಅನ್ವಯವಾಗುತ್ತದೆ. ರಾಜಕೀಯ ಮಾಡುವುದಾದರೆ ಮಠ ಬಿಟ್ಟು ಹೋಗಿ ರಾಜಕೀಯ ಮಾಡಬೇಕು. ರಾಜಕಾರಣಿಗಳು ಸಹ ರಾಜಕೀಯಕ್ಕಾಗಿ ಮಠಕ್ಕೆ ಹೋಗುವುದಾದರೆ, ಅವರೂ ರಾಜಕೀಯ ಬಿಟ್ಟು ಮಠ ಸೇರಲಿ. ತತ್ವನಿಷ್ಠೆಯ ಗುರುಗಳನ್ನು ನಾವೆಲ್ಲರೂ ಗೌರವಿಸಬೇಕು. ಅದನ್ನು ಪಾಲಿಸದವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕು’ ಎಂದು ಹೇಳಿದರು.

ಜಗತ್ತಿನ ಎಲ್ಲ ಭಾಷೆಗೂ ಅನುದಾನ: ‘ಬಸವಾದಿ ಶರಣರ ವಚನಗಳನ್ನು ಜಗತ್ತಿನ ಎಲ್ಲ ಭಾಷೆಗೂ ಅನುವಾದಿಸಲಾಗುತ್ತಿದೆ. ಈಗಾಗಲೇ 11 ವಿದೇಶಿ ಭಾಷೆಗಳಲ್ಲಿ ವಚನಗಳು ಲಭ್ಯವಿದ್ದು, ಇನ್ನು 9 ಭಾಷೆಗಳ ಅನುವಾದ ಪ್ರಗತಿಯಲ್ಲಿದೆ. ಪ್ರಪಂಚದ 211 ದೇಶಗಳ ಪೈಕಿ ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ ಈ ಬಾರಿ ಬಸವ ಜಯಂತಿ ಆಚರಿಸಲಾಗಿದೆ’ ಎಂದರು.

‘ಕುರಾನ್ ಬಿಟ್ಟು ಬೇರೆ ಧರ್ಮದ ಗ್ರಂಥಗಳನ್ನು ಅನುವಾದಿಸದ ವಿದ್ವಾಂಸರು ಸಹ, ಬಸವಣ್ಣನವರ ವಚನಗಳನ್ನು ತಮ್ಮ ಭಾಷೆಗೆ ಅನುವಾದಿಸಿದ್ದಾರೆ. ‘ಯಾವುದೇ ಧರ್ಮ–ಜಾತಿಗೆ ಸೀಮಿತವಾಗದ ಬಸವಣ್ಣನವರ ವಚನಗಳು ಮಾನವೀಯತೆಯ ಭಂಡಾರವಾಗಿವೆ. ಇದನ್ನೇ ನಮ್ಮ ಧರ್ಮವೂ ಹೇಳಿದೆ’ ಎಂದು ಅವರೆಲ್ಲರೂ ಉತ್ತರಿಸುವುದನ್ನು ಕೇಳಿದರೆ ಬಸವಣ್ಣ ಎಷ್ಟು ಎತ್ತರದ ಗುರು ಎಂಬುದು ನಮಗೆ ಅರ್ಥವಾಗುತ್ತದೆ’ ಎಂದು ತಿಳಿಸಿದರು.

ಸಾಹಿತಿ ಕಲ್ಯಾಣಮ್ಮ ಲಂಗೋಟಿ ಮಾತನಾಡಿ, ‘ದಾನದ ವಸ್ತುವಾಗಿ, ಹೆರಿಗೆ–ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಗೆ ಅರಿವಿನ ಮಹಾಮನೆ ಮೂಲಕ ಹೊಸ ಬೆಳಕು ಕೊಟ್ಟವರು ಬಸವಣ್ಣನವರು. ಅವರನ್ನು ಮಹಿಳೆಯರೆಲ್ಲರೂ ನಿತ್ಯವೂ ನೆನೆಯಬೇಕು’ ಎಂದರು.

ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಆರ್. ಮಾಗಾವಿ, ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಮಲ್ಲಿಕಾರ್ಜುನ ಹಿಂಚಿಗೇರಿ, ಕೆ.ಎಂ. ವಿಜಾಪುರ, ಜಗದೀಶ ಹತ್ತಿಕೋಟಿ, ಶಿವಾನಂದ ಹೊಸಮನಿ, ಶಿವಬಸಪ್ಪ ಮುದ್ದಿ, ಮುರುಗೆಪ್ಪ ಕಡೆಕೊಪ್ಪ ಇದ್ದರು.

ಹಾವೇರಿಯಲ್ಲಿ ಭಕ್ತಿ ದಾಸೋಹಕ್ಕೆ ಹೆಚ್ಚಿನ ಮಹತ್ವವಿದೆ. ಬಸವಣ್ಣನವರ ತತ್ವಗಳನ್ನು ಮನೆ–ಮನಗಳಿಗೆ ತಲುಪಿಸಲು ಬಸವಬಳಗ ಬಸವ ಕೇಂದ್ರ ಅಕ್ಕನ ಬಳಗ ಮಾಡುತ್ತಿರುವ ಕೆಲಸ ಶ್ಲಾಘನೀಯ
ಶೋಭಾತಾಯಿ ಆರ್. ಮಾಗಾವಿ ಅಧ್ಯಕ್ಷೆ ದಾನಮ್ಮದೇವಿ ಟ್ರಸ್ಟ್

ಹರಿದು ಹಂಚಿ ಹೋದ ಲಿಂಗಾಯತರು

‘ವಿಶ್ವಗುರು ಬಸವಣ್ಣನವರು ಹಾಗೂ ಬಸವಾದಿ ಶರಣರ ವಚನಗಳು ವಿಶ್ವದ ಮಾನವೀಯತೆಯ ಭಂಡಾರಗಳಾಗಿದೆ. ಇಡೀ ಜಗತ್ತು ಬಸವಣ್ಣನವರ ತತ್ವಗಳನ್ನು ಕೊಂಡಾಡುತ್ತಿದೆ. ಇಂಥ ಬಸವಣ್ಣನವರ ತತ್ವನಿಷ್ಠ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವ ಲಿಂಗಾಯತರು ಸಿಗುವುದು ವಿರಳವಾಗಿದೆ’ ಎಂದು ಸಿದ್ದಪ್ಪ ಲಂಗೋಟಿ ಬೇಸರ ಹೊರಹಾಕಿದರು.

‘ಲಿಂಗಾಯತವು 104 ಜಾತಿ ವಿಚಾರದಲ್ಲಿ ಹರಿದು ಹಂಚಿ ಹೋಗಿದೆ. ಬಣಜಿಗ ನೇಕಾರ ಸೇರಿದಂತೆ ಪ್ರತಿಯೊಂದು ಉಪಜಾತಿಗೂ ಸಂಘಗಳು ಹುಟ್ಟಿಕೊಂಡಿವೆ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು. ‘ಹುಟ್ಟಿನಿಂದ ಜಾತಿ ಬರುತ್ತದೆ. ಅದು ನಮ್ಮ ಕೈಯಲ್ಲಿಲ್ಲ. ಆದರೆ ಜೀವನದಲ್ಲಿ ಎಲ್ಲವೂ ತಿಳಿಯುತ್ತದೆ. ವಿದ್ಯೆ ಕಲಿತ ನಾವು ಜ್ಯೋತಿ ಸ್ವರೂಪದ ಲಿಂಗತತ್ವ ತಿಳಿದು ನಿಜ ಲಿಂಗಾಯತರಾದರೆ ಮಾತ್ರ ‘ಜಾಗತಿಕ ಲಿಂಗಾಯತ’ ಎಂಬುದು ಆಚರಣೆಗೆ ಬರುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.