ಹಾವೇರಿ: ಇಲ್ಲಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನಿತ್ಯವೂ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ದಾಸೋಹಕ್ಕಾಗಿ ಹಾವೇರಿಯ ಹಲವು ಪ್ರದೇಶಗಳ ಮಹಿಳೆಯರು 6 ಲಕ್ಷ ಹೋಳಿಗೆ ಸಿದ್ಧಪಡಿಸುತ್ತಿದ್ದು, ಡಿ. 27ರಂದು ಮಠಕ್ಕೆ ಅರ್ಪಿಸಲಿದ್ದಾರೆ.

ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಡಿ. 9ರಿಂದ ಡಿ. 30ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿತ್ಯವೂ ಸಂಜೆ ಆಧ್ಯಾತ್ಮ ಪ್ರವಚನವೂ ನಡೆಯುತ್ತಿದೆ. ಸದಾಶಿವ ಸ್ವಾಮೀಜಿಯವರ ಪಟ್ಟಾಧಿಕಾರದ 15ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಬೆಳ್ಳಿ ತುಲಾಭಾರವೂ ನಡೆಯಲಿದೆ.

ಹುಕ್ಕೇರಿಮಠದ ಶಾಲಾ ಆವರಣದಲ್ಲಿ ನಡೆಯುತ್ತಿರುವ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗಾಗಿ ಈಗಾಗಲೇ ದಾಸೋಹ ನಡೆಯುತ್ತಿದೆ. ಡಿ. 25ರಿಂದ ಡಿ. 30ರವರೆಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆಯುಲಿವೆ. ಈ ಸಂದರ್ಭದಲ್ಲೂ ಕ್ರೀಡಾಂಗಣದಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಹಾವೇರಿ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಜನರು ಹುಕ್ಕೇರಿಮಠ ಜಾತ್ರೆಗೆ ಬರಲಿದ್ದಾರೆ. ಅವರೆಲ್ಲರಿಗಾಗಿ ಅನ್ನ ದಾಸೋಹ ನಡೆಯುತ್ತಿದೆ. ದಾಸೋಹಕ್ಕೆ ಅಗತ್ಯವಿರುವ ದವಸ–ಧಾನ್ಯ ಸೇರಿ ಎಲ್ಲ ವಸ್ತುಗಳನ್ನು ಜನರು ದಾನದ ರೂಪದಲ್ಲಿ ಮಠಕ್ಕೆ ನೀಡುತ್ತಿದ್ದಾರೆ.

‘ದುಶ್ಚಟಗಳನ್ನು ದೂರ ಮಾಡಿ ಯುವಜನರನ್ನು ರಕ್ಷಿಸಲು’ ಸದಾಶಿವ ಸ್ವಾಮೀಜಿಯವರು ಜನಜಾಗೃತಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ಜನರು, ದಾನದ ವಾಗ್ದಾನ ಮಾಡುತ್ತಿದ್ದಾರೆ. ಅಕ್ಕಿ, ಬೆಲ್ಲ, ರವಾ, ಎಣ್ಣೆ, ತುಪ್ಪ, ರೊಟ್ಟಿ, ಚಟ್ನಿ ಪುಡಿ, ಉಪ್ಪಿನಕಾಯಿ, ಖರ್ಚಿಕಾಯಿ, ಶೇಂಗಾ ಉಂಡಿ, ಚಪಾತಿ... ಹೀಗೆ ನಾನಾ ಪದಾರ್ಥಗಳನ್ನು ಮಠಕ್ಕೆ ತಂದು ಕೊಡುತ್ತಿದ್ದಾರೆ.

ಗ್ರಾಮೀಣ ಭಾಗದ ಜನರು, ಅಲಂಕೃತ ಚಕ್ಕಡಿಯಲ್ಲಿ ಬಂದು ವಸ್ತುಗಳನ್ನು ಮಠಕ್ಕೆ ನೀಡುತ್ತಿದ್ದಾರೆ.

ಜಿಲ್ಲಾ ಕೇಂದ್ರವಾದ ಹಾವೇರಿಯ ವಿವಿಧ ಪ್ರದೇಶಗಳ 6 ಸಾವಿರ ಮಹಿಳೆಯರು 6 ಲಕ್ಷ ಹೋಳಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದು, ಹೋಳಿಗೆ ತಯಾರಿ ಕೆಲಸ ಭರದಿಂದ ಸಾಗಿದೆ.

ತ್ರಿವರ್ಣ ಧ್ವಜದ ಬಟ್ಟೆ ತೊಟ್ಟು ಮೆರವಣಿಗೆ: ಡಿ. 27ರಂದು ‘ಬಸವ ಬುತ್ತಿ’ ಹೆಸರಿನಲ್ಲಿ 6 ಲಕ್ಷ ಹೋಳಿಗೆಯ ಗಂಟುಗಳ ಮೆರವಣಿಗೆ ನಡೆಯಲಿದೆ. ಹೋಳಿಗೆ ಗಂಟುಗಳನ್ನು ಹೊತ್ತುಕೊಂಡು ಮಹಿಳೆಯರು, ಹುಕ್ಕೇರಿಮಠದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಿದ್ದಾರೆ.

ತ್ರಿವರ್ಣ ಧ್ವಜದ ಬಣ್ಣವುಳ್ಳ ಬಟ್ಟೆ ಧರಿಸಲಿರುವ ಮಹಿಳೆಯರು, ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ನಂತರ, ಕ್ರೀಡಾಂಗಣದಲ್ಲಿ ನಡೆಯುವ ದಾಸೋಹದಲ್ಲಿ ಭಕ್ತರಿಗೆ ಹೋಳಿಗೆ ನೀಡಲಾಗುತ್ತದೆ.

ಹಾವೇರಿ ನಗರದ 6000 ಮಹಿಳೆಯರು ಸುಮಾರು 6 ಲಕ್ಷ ಹೋಳಿಗೆ ಸಿದ್ಧಪಡಿಸುತ್ತಿದ್ದಾರೆ. ಡಿ. 27ರಂದು ಬಸವ ಬುತ್ತಿ ಮೆರವಣಿಗೆ ಮೂಲಕ ದಾಸೋಹಕ್ಕೆ ನೀಡಲಿದ್ದಾರೆ
ಶಿವರಾಜ ಸಜ್ಜನರ ಸ್ವಾಮೀಜಿ, ರಜತ ತುಲಾಭಾರ ಸಮಿತಿ ಗೌರವಾಧ್ಯಕ್ಷ

‘ಯುವಕರ ರಕ್ಷಣೆಗೆ ಜನಜಾಗೃತಿ’

‘ಮದ್ಯ ಗುಟ್ಕಾ ತಂಬಾಕು ಉತ್ಪನ್ನದ ದುಶ್ಚಟಗಳಿಂದಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದೆ. ಯುವಕರನ್ನು ದುಶ್ಚಟಗಳಿಂದ ರಕ್ಷಿಸಲು ಜನಜಾಗೃತಿ ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ನಿಮಿತ್ತ ಗದಿಗೇರ ಓಣಿ ಯರೇಶಿಮಿ ಓಣಿ ಹಾಗೂ ಮೇಲಿನಪೇಟೆಯಲ್ಲಿ ಗುರುವಾರ ನಡೆದ ‘ಜನಜಾಗೃತಿ ಪಾದಯಾತ್ರೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಪರಂಪರೆಯುಳ್ಳ ಹುಕ್ಕೇರಿಮಠದ ಭಕ್ತರು ದುಶ್ಚಟಗಳಿಂದ ಸಂಕಷ್ಟ ಎದುರಿಸಬಾರದು. ಇದೇ ಕಾರಣಕ್ಕೆ ತಾಲ್ಲೂಕಿನ 70 ಹಳ್ಳಿಗಳಲ್ಲಿ ಜನಜಾಗೃತಿ ರಥಯಾತ್ರೆ ನಡೆಯಿತು. ಡಿ. 27ರಂದು ಜಿಲ್ಲಾ ಕ್ರೀಡಾಂಗಣದಲ್ಲಿ 51 ಸಾವಿರ ಭಕ್ತರ ಸಮ್ಮುಖದಲ್ಲಿ ವಚನ ವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ ಮಾತನಾಡಿ ‘ಹಸಿದ ಹೊಟ್ಟೆಗೆ ಅನ್ನ ಜ್ಞಾನ ಹಾಗೂ ಸಂಸ್ಕಾರ ನೀಡಿದ ಹೆಗ್ಗಳಿಕೆ ಹುಕ್ಕೇರಿಮಠದ್ದು’ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಗೆ ರುದ್ರಾಕ್ಷಿ ವಿತರಿಸಲಾಯಿತು. ವಿಜಯಪುರದ ಘನಲಿಂಗ ಸ್ವಾಮೀಜಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಕೂಡಲದ ಗುರು ಮಹೇಶ್ವರ ಸ್ವಾಮೀಜಿ ಮಾದನ ಹಿಪ್ಪರಗಿಯ ಶಿವಲಿಂಗ ಸ್ವಾಮೀಜಿ ರಾವೂರಿನ ಸಿದ್ಧಲಿಂಗ ಸ್ವಾಮೀಜಿ ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ವೀರಭದ್ರ ದೇವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.