ರಟ್ಟೀಹಳ್ಳಿ-ತೋಟಗಂಟಿ ಗ್ರಾಮದ ಮಧ್ಯ ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಾಂದಾರ ಕಂ ಸೇತುವೆ ಮೇಲೆ ನಿತ್ಯ ನೂರಾರು ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿರುವುದು.
ಬಾಂದಾರ ಕಂ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲು ಮತ್ತು ಕೇವಲ ಪಾದಚಾರಿ ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮವಹಿಸಲಾಗುವುದು
ಚಿದಂಬರ ಹಾವನೂರ ಎಇಇ ಸಣ್ಣ ನೀರಾವರಿ ಇಲಾಖೆ
ಬಾಂದಾರ ಕಂ ಸೇತುವೆಯ ಅಗಲ ಕಿರಿದಾಗಿದ್ದು ಈ ಮಾರ್ಗದಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಂಚರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮವಹಿಸಬೇಕು
ದೇವರಾಜ ನಾಗಣ್ಣನವರ ಮುಖಂಡ
ಸುರಕ್ಷತೆಗೆ ಮಾರ್ಗೋಪಾಯಗಳೇನು?
ರಟ್ಟೀಹಳ್ಳಿ-ತೋಟಗಂಟಿ ಗ್ರಾಮಗಳ ಮಧ್ಯೆ ನಿರ್ಮಿಸಿರುವ ಬಾಂದಾರ ಕಂ ಸೇತುವೆ ಸ್ಥಳೀಯ ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಜೊತೆಗೂಡಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸುರಕ್ಷತೆ ಕಾಯ್ದುಗೊಳ್ಳಬಹುದಾಗಿದೆ ಎನ್ನಲಾಗಿದೆ. ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಈ ಬಾಂದಾರ ಮೇಲೆ ಕೇವಲ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ಮಾತ್ರ ಸಂಚರಿಸುವಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಬಾಂದಾರ ಹತ್ತಿರ ಸೂಕ್ತ ಸೂಚನಾ ಫಲಕ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸುವುದರಿಂದ ರಾತ್ರಿ ವೇಳೆ ಸಂಚರಿಸುವವರಿಗೆ ಅನುಕೂಲವಾಗುತ್ತದೆ. ಇತ್ಯಾದಿ ಮಾರ್ಗೋಪಾಯಗಳ ಮೂಲಕ ಬಾಂದಾರ ಬಳಕೆ ಹಾಗೂ ಸುರಕ್ಷತೆ ಕಾಯ್ದುಕೊಳ್ಳಬಹುದಾಗಿದೆ.