ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರದ ಉದ್ಯಾನಕ್ಕೆ ಸೊಲಬಕ್ಕನವರ ಹೆಸರು’

ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಹೇಳಿಕೆ
Last Updated 20 ನವೆಂಬರ್ 2020, 16:10 IST
ಅಕ್ಷರ ಗಾತ್ರ

ಹಾವೇರಿ: ‘ಕ್ರಿಯಾಶೀಲ ಮತ್ತು ದೂರದೃಷ್ಟಿಯ ಕಲಾವಿದರಾಗಿದ್ದ ಡಾ.ಟಿ.ಬಿ.ಸೊಲಬಕ್ಕನವರ ಅವರು ನಾಡಿನ ಚಿತ್ತ ಹಾವೇರಿಯತ್ತ ತಿರುಗುವಂತೆ ಮಾಡಿದ್ದರು. ಅವರ ಹೆಸರು ಅಮರವಾಗಿ ಉಳಿಯಲು ನಗರದ ಯಾವುದಾದರೊಂದು ಉದ್ಯಾನಕ್ಕೆ ನಾಮಕರಣ ಮಾಡಲು ಸೂಚಿಸುತ್ತೇನೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಹೇಳಿದರು.

ನಗರದ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಟಿ.ಬಿ.ಸೊಲಬಕ್ಕನವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ‘ಕಲೆಯೇ ಇರಲಿ, ಜೀವನವೇ ಇರಲಿ ಅಲ್ಲಿ ಹೊಸ ಹೊಸ ಹಾದಿಗಳನ್ನು ಹುಡುಕುತ್ತಿದ್ದ ಸೊಲಬಕ್ಕನವರು ಎಲ್ಲ ಸವಾಲುಗಳನ್ನು ಎದುರಿಸಿ ಗೆದ್ದ ಕಲಾವಿದ. ಅವರ ಒಡನಾಟ ಕಿರಿಯರಿಗೆ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿದ್ದವು’ ಎಂದರು.

ಸಭೆಯಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ ಆಲದಕಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಪರಿಮಳಾ ಜೈನ್‌, ಲತಾ ಪಾಟೀಲ, ರೇಣುಕಾ ಗುಡಿಮನಿ, ಹನುಮಂತಸಿಂಗ್ ರಜಪೂತ, ಪೃಥ್ವಿರಾಜ ಬೆಟಗೇರಿ, ಡಾ.ಬೆನ್ನೂರ, ಶಶಿಧರ, ರೇಖಾ ಹಂಚಿನಮನಿ, ನಾಗರಾಜ ನಡುವಿನಮಠ, ಎಸ್.ಆರ್.ಹಿರೇಮಠ, ವೀರಣ್ಣ ಶೀಲವಂತರ, ಶಂಕರ ತುಮ್ಮಣ್ಣನವರ, ಜಿ.ಎಂ, ಓಂಕಾರಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT