ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಕುಸಿತ

Published 18 ಏಪ್ರಿಲ್ 2024, 14:22 IST
Last Updated 18 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿನ ಅಂತರ ರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 76,054 ಚೀಲ (19,013 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಕುಸಿತವಾಗಿದೆ.

ಕಳೆದ ಸೋಮವಾರ ಮಾರುಕಟ್ಟೆಗೆ 1,42,311 ಚೀಲ (35,577 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರು ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ. ಹೀಗಾಗಿ ಆವಕದಲ್ಲಿ ದಿಢೀರ್‌ ಕುಸಿತವಾಗಿದೆ ಎನ್ನಲಾಗಿದೆ.

ಗುರುವಾರ 8,593 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟವಿಲ್ಲದ 269 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 50 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹34,021ರಂತೆ, 58 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹29,099ರಂತೆ ಮತ್ತು ಗುಂಟೂರು ತಳಿ ₹17,389 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ.

ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹2 ಸಾವಿರ ಇಳಿಕೆಯಾಗಿದ್ದು, ಬ್ಯಾಡಗಿ ಕಡ್ಡಿ ಮತ್ತು ಗುಂಟೂರ ತಳಿ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹31,009, ಬ್ಯಾಡಗಿ ಕಡ್ಡಿ ₹25,269 ಹಾಗೂ ಗುಂಟೂರ ತಳಿ ₹11,609 ರಂತೆ ಮಾರಾಟವಾಗಿವೆ.

ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 318 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಗುರುವಾರದ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ, ₹ಗಳಲ್ಲಿ)
ಬ್ಯಾಡಗಿ ಕಡ್ಡಿ; 2,299- 29,099
ಬ್ಯಾಡಗಿ ಡಬ್ಬಿ; 2,809- 34,021
ಗುಂಟೂರ ತಳಿ;0869-17,389

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT