ಹಾನಗಲ್: ಜನಸೇವೆ ಮಾಡುವ ಛಲ ನನ್ನಲ್ಲಿದೆ, ಬಲ ತುಂಬಿ ಆಶೀರ್ವಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮನವಿ ಮಾಡಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಬ್ಯಾತನಾಳ, ಕೆಲವರಕೊಪ್ಪ, ಮಾಳಾಪುರ, ಕರೆಕ್ಯಾತನಹಳ್ಳಿ, ಕರೆಕ್ಯಾತನಹಳ್ಳಿ ತಾಂಡಾ, ಬ್ಯಾಗವಾದಿ, ಕಲ್ಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದರು.

ಕಳೆದ ಬಾರಿ ಟಿಕೆಟ್ ಘೋಷಣೆ ವಿಳಂಬವಾಯಿತು. ಜನರಿಗೆ ನನ್ನ ಬಗೆಗೆ ತಿಳಿದಿರಲಿಲ್ಲ. ಬಿಜೆಪಿಯೂ ಸಹ ಗೊಂದಲ ಸೃಷ್ಟಿಸಿತು. ನನ್ನ ಹಣೆಬರಹವೂ ಸರಿ ಇರಲಿಲ್ಲ ಹೀಗಾಗಿ ಅಲ್ಪ ಮತಗಳಿಂದ ಪರಾಭವಗೊಂಡೆ. ಆದರೀಗ ನಿರಂತರ ಸಂಪರ್ಕ, ಒಡನಾಟದೊಂದಿಗೆ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ನೋವು-ನಲಿವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಜನರ ತೀರ್ಪು ನನ್ನ ಪರವಾಗಿ ಬರುವ ಪೂರ್ಣ ವಿಶ್ವಾಸದಲ್ಲಿದ್ದೇನೆ ಎಂದರು.

ಕಾರ್ಯಕರ್ತರು ಚುನಾವಣೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ಹಗಲು, ಇರುಳಿನ ಪರಿವೇ ಇಲ್ಲದೇ ಓಡಾಡುತ್ತಿದ್ದಾರೆ. ತಾವೇ ಅಭ್ಯರ್ಥಿ ಎನ್ನುವ ಭಾವನೆ ಅವರಲ್ಲಿ ಮೂಡಿದೆ. ಜನ ಸಹ ಅಷ್ಟೇ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪರವಾದ ವಾತಾವರಣದಿಂದ ವಿರೋಧ ಪಕ್ಷಗಳಲ್ಲಿ ಭೀತಿ ಸೃಷ್ಟಿಯಾಗಿದ್ದು, ಕುತಂತ್ರ ಮಾಡುತ್ತಿದ್ದಾರೆ. ಅದು ಫಲ ನೀಡಲ್ಲ, ಜನ ಕುತಂತ್ರಿಗಳಿಗೆ ಬುದ್ದಿ ಕಲಿಸಲಿದ್ದಾರೆ ಎಂದರು.

ಬಸವರಾಜ್ ಆಲದಕಟ್ಟಿ, ಮಂಜು ಕಮ್ಮಾರ, ಶೇಕಪ್ಪ ಹೊಸಮನಿ, ನಾಗರಾಜ್ ಮಜ್ಜಗಿ, ಭೀಮಣ್ಣ ಲಮಾಣಿ, ಬಸವಂತ ನಾಯ್ಕ, ಮಂಜು ಗುರಣ್ಣನವರ, ಬಂಗಾರೆಪ್ಪ ಕಲಕೇರಿ, ನಾಗರಾಜ್ ವಡ್ಡರ, ಆನಂದಪ್ಪ ಲಮಾಣಿ, ಸೋಮು ಲಮಾಣಿ, ವಾಲೇಶ್ ಲಮಾಣಿ, ಬಸವರಾಜ್ ಮಾಳಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.