ಅಕ್ಕಿಆಲೂರ: ತಮ್ಮ ಆಸ್ತಿಯನ್ನು ಬೇರೊಬ್ಬರ ಹೆಸರಿಗೆಅನಧಿಕೃತವಾಗಿ ವರ್ಗಾಯಿಸಿದ್ದ ಸ್ಥಳೀಯ ಗ್ರಾ.ಪಂ ವಿರುದ್ಧ ಹೋರಾಡಿದ ವೃದ್ಧರೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ.
ಇಲ್ಲಿನ ಕುಮಾರ ನಗರದ ಮಲ್ಲಿಕಾರ್ಜುನಪ್ಪ ಗೊಂದಿ ಎಂಬುವವರ 50X60 ನಿವೇಶನದಲ್ಲಿ ಒಟ್ಟು ಮೂರು ಮನೆಗಳನ್ನು 2016ರಲ್ಲಿ ಮುರಳೀಧರ ಜನಿವಾರ ಎಂಬುವವರಿಗೆಅನಧಿಕೃತವಾಗಿ ವರ್ಗಾಯಿಸಲಾಗಿತ್ತು. 2020ರಲ್ಲಿ ಮಲ್ಲಿಕಾರ್ಜುನಪ್ಪ ಕರಬಾಕಿ ಭರಿಸಲು ತೆರಳಿದಾಗ ತಮ್ಮ ಆಸ್ತಿ ಬೇರೊಬ್ಬರ ಹೆಸರಿಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿತ್ತು.
ಜತೆಗೆ ಮುರಳೀಧರ ಸ್ಥಳೀಯ ಖಾಸಗಿ ಬ್ಯಾಂಕ್‍ವೊಂದರಲ್ಲಿ ಈ ಆಸ್ತಿಯ ಮೇಲೆ ₹5 ಲಕ್ಷ ಸಾಲ ಪಡೆದಿದ್ದು, ವೃದ್ಧ ಮಲ್ಲಿಕಾರ್ಜುನಪ್ಪ ಆತಂಕಕ್ಕೊಳಗಾಗಿದ್ದರು.
ಈ ಅಕ್ರಮ ವಿರೋಧಿಸಿ ಮಲ್ಲಿಕಾರ್ಜುನಪ್ಪ ಕುಟುಂಬ ಸಹಿತ ಗ್ರಾ.ಪಂ ಎದುರು ಮೌನ ಪ್ರತಿಭಟನೆ ನಡೆಸಿದ್ದರು. ಸವಣೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮೂಲ ಮಾಲೀಕರಾದ ಮಲ್ಲಿಕಾರ್ಜುನಪ್ಪ ಗೊಂದಿ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ಗ್ರಾ.ಪಂ ಮಲ್ಲಿಕಾರ್ಜುನಪ್ಪ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿ ಇ ಸ್ವತ್ತು ಉತಾರ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.