ಹುಕ್ಕೇರಿಮಠದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಸಮಾರಂಭ ನಡೆದ ಜಿಲ್ಲಾ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದ್ದರಿಂದ ಹೆಚ್ಚುವರಿ ಜನರು ಕ್ರೀಡಾಂಗಣದ ಹೊರಭಾಗದಲ್ಲಿ ಪರದೆ ಮೇಲೆ ಸಮಾರಂಭ ವೀಕ್ಷಿಸಿದರು
ಭಾರತದ ಪರಂಪರೆಗೆ ಮಹತ್ವದ ಸ್ಥಾನವಿದೆ. ಸಾಧು–ಸಂತರ ಗುಣದಿಂದ ಈ ಜಗತ್ತು ಉಳಿದಿದೆ. ಆಧ್ಯಾತ್ಮಿಕ ಚಿಂತನೆ ಹಾಗೂ ಪ್ರಾರ್ಥನೆಯಿಂದ ಜಗತ್ತು ಬೆಳೆಯುತ್ತಿದೆ
-ಶಿವಾನಂದ ರಾಜೇಂದ್ರ ಸ್ವಾಮೀಜಿ, ಹಾರನಹಳ್ಳಿಯ ಕೋಡಿಮಠ
ಮನುಷ್ಯ ಯಾವುದೇ ಕಷ್ಟ ಬರಬಾರದೆಂದು ಬಯಸುತ್ತಾನೆ. ಕಷ್ಟ ಬಂದಾಗ ದುಃಖಿಸುತ್ತಾನೆ. ಯಾವ ಮನುಷ್ಯ ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸುತ್ತಾನೆಯೋ ಅವನು ಸದಾ ಸುಖಿಯಾಗಿರುತ್ತಾನೆ
-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ಸುತ್ತೂರು ವೀರ ಸಿಂಹಾಸನ ಮಠ