ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮತ್ತೆ 957 ಜನರಿಗೆ ಕೊರೊನಾ ದೃಢ, ಸೋಂಕಿನಿಂದ 11 ಜನ ಸಾವು

Last Updated 30 ಏಪ್ರಿಲ್ 2021, 4:05 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ‌ 11 ಜನ ನಿಧನರಾಗಿದ್ದಾರೆ ಎಂದು ಗುರುವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆ (ಸಾರಿ) ಹಿನ್ನೆಲೆಯಿಂದ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದ 46 ವರ್ಷದ ಮಹಿಳೆ ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.27ಕ್ಕೆ ನಿಧನರಾದರು.

ಸಾರಿ, ಅಧಿಕ ರಕ್ತದೊತ್ತಡದಿಂದ‌ ಬಳಲುತ್ತಿದ್ದ ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ 80 ವರ್ಷದ ವೃದ್ಧೆ ಏ.23ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.27ಕ್ಕೆ ನಿಧನ ಹೊಂದಿದ್ದಾರೆ. ಸಾರಿ ಜೊತೆಗೆ ಕಿಡ್ನಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪುರ ಪಟ್ಟಣದ 70 ವರ್ಷದ ವೃದ್ಧ ಏ.23 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.27ಕ್ಕೆ ಮೃತಪಟ್ಟಿದ್ದಾರೆ.

ಸಾರಿ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಬಿ) ಗ್ರಾಮದ 60 ವರ್ಷದ ವೃದ್ಧೆ ಏ.19ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.28ಕ್ಕೆ ನಿಧನರಾದರು. ಸಾರಿ, ಮಧುಮೇಹದಿಂದ ಬಳಲುತ್ತಿದ್ದ ಕಲಬುರ್ಗಿಯ ಲಾಲಗೇರಿ ಕ್ರಾಸ್ ಪ್ರದೇಶದ 75 ವರ್ಷದ ವೃದ್ಧ ಏ.21ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.29ಕ್ಕೆ ಮೃತಪಟ್ಟರು.

ಸಾರಿ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಬಡೇಪೂರ ಕಾಲೊನಿಯ 55 ವರ್ಷದ ಮಹಿಳೆ ಏ.22ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.28ರಂದು ಸಾವಿಗೀಡಾದರು. ಸಾರಿ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ವಿಶ್ವೇಶ್ವರಯ್ಯ ನಗರದ 74 ವರ್ಷದ ವೃದ್ಧ ಏ.26ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.28ಕ್ಕೆ ನಿಧನ ಹೊಂದಿದ್ದಾರೆ. ಸಾರಿ, ಮಧುಮೇಹದಿಂದ ಬಳಲುತ್ತಿದ್ದ ಗಾಜೀಪುರ ಪ್ರದೇಶದ 66 ವರ್ಷದ ವೃದ್ಧ ಏ.25 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.26ಕ್ಕೆ ನಿಧನರಾದರು. ಸಾರಿ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಹಾಗರಗಾ‌ ಕ್ರಾಸ್ ಪ್ರದೇಶದ 80 ವರ್ಷದ ವೃದ್ಧ ಏ.25ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.26ಕ್ಕೆ ಮೃತಪಟ್ಟರು. ಸಾರಿ ಹಿನ್ನೆಲೆಯಿಂದ ಅಫಜಲಪುರ ತಾಲ್ಲೂಕಿನ ಬಡದಾಳ ಗ್ರಾಮದ 65 ವರ್ಷದ ವೃದ್ಧ ಏ 23ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.28ಕ್ಕೆ ನಿಧನರಾಗಿದ್ದಾರೆ.

ತೀವ್ರ ವಿಷಮಶೀತ ಜ್ವರ (ಐಎಲ್ಐ) ಹಿನ್ನೆಲೆಯಿಂದ ಆಳಂದ ತಾಲ್ಲೂಕಿನ ಕವಲಗಾ ಗ್ರಾಮದ 70 ವರ್ಷದ ವೃದ್ಧೆ ಏ.27ರಂದು ಮನೆಯಲ್ಲಿಯೇ ನಿಧನ ಹೊಂದಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 460 ಜನ ನಿಧನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಮತ್ತೆ 957 ಜನರಿಗೆ ಕೊರೊನಾ ದೃಢಪಟ್ಟಿದ್ದು, ಗುರುವಾರ 537 ಜನ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT