ಶನಿವಾರ, ಜನವರಿ 18, 2020
19 °C

ಬಸ್‌ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ಹಳೆ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್‌ ಬಳಿ ಬೈಕ್‌ನಿಂದ ಬಿದ್ದ ಮಹಿಳೆ ಬಸ್ ಚಕ್ರಕ್ಕೆ ಸಿಲುಕಿ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ನಸೀಮಾ ಬೇಗಂ (55) ಮೃತಪಟ್ಟ ಮಹಿಳೆ. ಪತಿ ಮೆಹಬೂಬ್‌ ಸಾಬ್‌ ಅವರ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಸ್ಕಿಡ್‌ ಆಗಿ ನೆಲಕ್ಕೆ ಬಿದ್ದರು. ಹಿಂಬದಿಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟರು. ಮೆಹಬೂಬ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಸಾರಿಗೆ ಸಂಸ್ಥೆಯ ಬಸ್‌ ಕಲಬುರ್ಗಿಯಿಂದ ಅಫಜಲಪುರದತ್ತ ಹೊರಟಿತ್ತು. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು