ಗುರುವಾರ , ಆಗಸ್ಟ್ 5, 2021
28 °C

ಕಲಬುರ್ಗಿಯಲ್ಲಿ ಅಧಿಕಾರಿ ಜಗದೇವಪ್ಪ ಮುಗುಟ ಮನೆ ಮೇಲೆ ಎಸಿಬಿ ದಾಳಿ 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಗದೇವಪ್ಪ ಅವರ ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿರುವ ಮನೆ, ವಾಣಿಜ್ಯ ಸಂಕೀರ್ಣ, ಯಾದಗಿರಿಯ ಕಚೇರಿ , ಬೀದರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಯಾದಗಿರಿ ಎಸಿಬಿ ಡಿವೈಎಸ್ಪಿ ಗುರುನಾಥ ಮತ್ತೂರ, ಕಲಬುರ್ಗಿ ಡಿವೈಎಸ್ಪಿ ಸುಧಾ ಆದಿ, ಬೀದರ್ ಡಿವೈಎಸ್ಪಿ ಬಷಿರೋದ್ದೀನ್ ಪಟೇಲ್, ಇನ್ಸ್ಪೆಕ್ಟರ್ ಗಳಾದ ಜಿ.ಎಸ್.ಬಿರಾದಾರ, ಶರಣಬಸಪ್ಪ ಕೂಡ್ಲಾ ದಾಳಿ ನೇತೃತ್ವ ವಹಿಸಿದ್ದಾರೆ.

40ಕ್ಕೂ ಹೆಚ್ಚು ಸಿಬ್ಬಂದಿ ದಾಖಲೆ ಪರಿಶೀಲನೆ‌ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು